ಚಲನ ಚಿತ್ರಗಳ ಉಗಮ ಕಾಲದ ಪವಾಡ ಪುರುಷ ಡಾ.ರಾಜ್..!

ಕನ್ನಡಿಗರ ಹೃನ್ಮನಗಳಲ್ಲಿ ಸದಾ ಕಾಲವೂ ಧ್ರುವ ತಾರೆಯಾಗಿ ಕಂಗೊಳಿಸುವ ವರನಟ ಡಾ.ರಾಜ್ ಕುಮಾರ್ ಸಿನಿಮಾ ಬದುಕಿನ ಅನನ್ಯ ಸಾಧಕರಾಗಿ ಹೊಮ್ಮಿದ್ದರಲ್ಲಿ ಯಾವ ಅಚ್ಚರಿಯೂ ಇರಲಿಲ್ಲ. ಬದಲಿಗೆ ಅವರದೇ ಕಠಿಣ ಪರಿಶ್ರಮ, ತಾಳ್ಮೆ ಮತ್ತು ಕಾಲಮಾನ ಅವರನ್ನು ಎತ್ತರಕ್ಕೆ ಏರಿಸುತ್ತಾ ಹೋಯಿತು. ನಿಜವಾದ ಅರ್ಥದಲ್ಲಿ ರಾಜ್ ಪವಾಡ ಪುರುಷರಾಗಿ ಕ್ಷಣ ಕ್ಷಣವೂ ಗೋಚರಿಸುತ್ತಾ ಹೋದರು. ವೃತ್ತಿಯಲ್ಲಿನ ಬದ್ಧತೆ, ವಿನಯವಂತಿಕೆ ಮತ್ತು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆರೆಯುವ ಗುಣ ಅವರಿಗೆ ವರದಾನವಾಯಿತು. ರಾಜ್ ಇಹಲೋಹ ತ್ಯಜಿಸಿ 20 ವರ್ಷಗಳ ಬಳಿಕವೂ ಅವರ…

Share :

ಕನ್ನಡಿಗರ ಹೃನ್ಮನಗಳಲ್ಲಿ ಸದಾ ಕಾಲವೂ ಧ್ರುವ ತಾರೆಯಾಗಿ ಕಂಗೊಳಿಸುವ ವರನಟ ಡಾ.ರಾಜ್ ಕುಮಾರ್ ಸಿನಿಮಾ ಬದುಕಿನ ಅನನ್ಯ ಸಾಧಕರಾಗಿ ಹೊಮ್ಮಿದ್ದರಲ್ಲಿ ಯಾವ ಅಚ್ಚರಿಯೂ ಇರಲಿಲ್ಲ. ಬದಲಿಗೆ
ಅವರದೇ ಕಠಿಣ ಪರಿಶ್ರಮ, ತಾಳ್ಮೆ ಮತ್ತು ಕಾಲಮಾನ ಅವರನ್ನು ಎತ್ತರಕ್ಕೆ ಏರಿಸುತ್ತಾ ಹೋಯಿತು.

ನಿಜವಾದ ಅರ್ಥದಲ್ಲಿ ರಾಜ್ ಪವಾಡ ಪುರುಷರಾಗಿ ಕ್ಷಣ ಕ್ಷಣವೂ ಗೋಚರಿಸುತ್ತಾ ಹೋದರು. ವೃತ್ತಿಯಲ್ಲಿನ ಬದ್ಧತೆ, ವಿನಯವಂತಿಕೆ ಮತ್ತು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆರೆಯುವ ಗುಣ ಅವರಿಗೆ ವರದಾನವಾಯಿತು.

ರಾಜ್ ಇಹಲೋಹ ತ್ಯಜಿಸಿ 20 ವರ್ಷಗಳ ಬಳಿಕವೂ ಅವರ ಬಗೆಗಿನ ವಿಶೇಷಣಗಳು ಇನ್ನಷ್ಟು ಮತ್ತಷ್ಟು ಎಂದು ಹೊರ ಬೀಳುತ್ತವೆ ಎಂದರೆ ಅವರ ಕಠಿಣ ಪರಿಶ್ರಮ ಮತ್ತು ಅದರ ಸಾರ್ಥಕತೆ ಎಷ್ಟಿರಬಹುದು ಎಂಬುದು ಅಂದಾಜಿಗೇ ಸಿಗುತ್ತಿಲ್ಲ.

ಸಿನಿಮಾ ಉದ್ಯಮದ ಒಂದೊಂದೇ ಬೆಳವಣಿಗೆಯ ಮೆಟ್ಟಿಲುಗಳಿಗೆ ಹೆಗಲು ಕೊಡುತ್ತಾ ಹೋದ ಅವರ ಪ್ರತಿಭಾ ಸಾಮರ್ಥ್ಯಕ್ಕೆ ಅದೇ ಮೆಟ್ಟಿಲುಗಳು ಏಣಿಯಾಗಿ ವರ ನೀಡಿದವು.‌

ಒಮ್ಮೆ ಹಿರಿಯ ನಟಿ ಲೀಲಾವತಿಯವರು ಮಾತನಾಡುವಾಗ, ‘ಸಂತ ತುಕಾರಾಂ’ ಚಿತ್ರದಲ್ಲಿ ರಾಜ್ ಅಭಿನಯಿಸುವಾಗ ಕಾಯ್ದುಕೊಂಡಿದ್ದ ತಾಳ್ಮೆ ಮತ್ತು ಅವರಿಗಿರುವ ಸಹನೆ ವಿಷಯ ತಿಳಿದು ಬೆಚ್ಚಿ ಬಿದ್ದಿದ್ದ ಸಂಗತಿಗಳನ್ನು ಹೇಳಿದ್ದರು.

ಒಬ್ಬ ಸಂತನಲ್ಲಿ ಇರಬಹುದಾದ ಪ್ರಸನ್ನ ಭಾವ ಅವರ ಮುಖದಲ್ಲಿತ್ತು. ನಿಜ ಹೇಳಬೇಕೆಂದರೆ ಗುಣವೂ ಸಂತನದೇ. ತಾನೊಬ್ಬ ‘ಮಹಾನ್ ನಟ’ ಎಂಬ ಅರಿವಾಗಲಿ, ಅಹಂ ಆಗಲಿ ಯಾವತ್ತೂ ಅವರೊಳಗೆ ಇರಲೇ ಇಲ್ಲ.

ಈಗಿನಂತೆ ಆಗ ಸೌಲಭ್ಯಗಳೇನೂ ಇರಲಿಲ್ಲ. ಡಾ.ರಾಜ್ ನೀರಿನಲ್ಲಿ ನಿಲ್ಲಬೇಕಾದ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿತ್ತು. ಚಳಿಯಲ್ಲಿ ತಣ್ಣಗೆ ಕೊರೆಯುವ ನೀರಿನಲ್ಲಿ ಸುಮ್ಮನೆ ಕೈ ಇಡಲು ಸಾಧ್ಯವಾಗದಷ್ಟು ಕಷ್ಟವಿರುವಾಗ ಅದರಲ್ಲಿ ಯಾವುದೇ ವಿರೋಧವಿಲ್ಲದೆ ಇಡೀ ರಾತ್ರಿ ನೀರಿನಲ್ಲಿ ನಿಂತಿದ್ದ ಅವರ ಮುಖ ನೋಡಿದಾಗ ಅಯ್ಯೋ ಎನಿಸುತ್ತಿತ್ತು. ರಾಜ್ ಅವರ ಜಾಗದಲ್ಲಿ ಬೇರೆ ಯಾರೇ ಇದ್ದರೂ ನೀರಿಗಿಳಿಯಲು ನಿರಾಕರಿಸಿ ಬಿಡುತ್ತಿದ್ದರು. ಆದರೆ ಪಾತ್ರಕ್ಕೆ ನ್ಯಾಯ ಒದಗಿಸುವುದು ತಮ್ಮ ಪರಮ ಗುರಿ ಎಂದುಕೊಂಡಿದ್ದ ರಾಜ್ ನೀರಿನ ತಣ್ಣಗಿನ ಕೊರೆತವನ್ನು ಸಹಿಸಿಕೊಂಡಿದ್ದರು. ಹೇಳಿ ಕೇಳಿ ಅದು ಸಂತನ ಪಾತ್ರ. ಆ ಪಾತ್ರದಲ್ಲಿ ಅವರು ತಲ್ಲೀನರಾಗಿ ಹೋಗಿದ್ದರು. ಇಷ್ಟೊಂದು ತಾದ್ಯಾತ್ಮ ಕಾಯ್ದುಕೊಂಡಿದ್ದರಿಂದಲೇ ಅವರು ಮಹಾನ್ ನಟರಾದರು ಎಂದು ನಿಟ್ಟುಸಿರು ಹೊರ ಹಾಕಿದ್ದರು ಲೀಲಾವತಿ.

ಚಿತ್ರರಂಗದ ಉದಯ ಕಾಲದಲ್ಲೇ ದೇವರ ವರಪುತ್ರನಂತೆ ಚಿತ್ರರಂಗ ಪ್ರವೇಶಿಸಿದ ಡಾ.ರಾಜ್ ಕುಮಾರ್ ಮಾಡದ ಪಾತ್ರವೇ ಇಲ್ಲ. ಆರಂಭದಲ್ಲಿ ಕಾದಂಬರಿ ಆಧಾರಿತ ಚಿತ್ರಗಳಲ್ಲೇ ಹೆಚ್ಚು ನಟಿಸಿದ ರಾಜ್ ಅವರಿಗೆ ಅದೊಂದು ವರವಾಗಿತ್ತು. ಏಕೆಂದರೆ ಸಾಮಾಜಿಕ ನೆಲೆಯಲ್ಲಿ ಕೌಟುಂಬಿಕ ವಿಷಯಗಳು ಬಿಂಬಿತವಾಗುತ್ತಿದ್ದವು. ಈ ಪಾತ್ರಗಳಲ್ಲಿ ಸಮಕಾಲೀನ ಒತ್ತಡದಿಂದ ಅವು ಜನ ಸಾಮಾನ್ಯರ ಬದುಕಿನ ಅಭಿವ್ಯಕ್ತಿಯಂತೆ ಜನರಿಗೆ ಹೆಚ್ಚು ಆಪ್ತವಾಗುತ್ತಿದ್ದವು.

‘ಬಬ್ರುವಾಹನ’ ಚಿತ್ರದಂತಹ ಒಂದು ಮಾಸ್ಟರ್ ಪೀಸ್ ರಾಜ್ ಅವರನ್ನು ಉತ್ತುಂಗಕ್ಕೆ ಏರಿಸಿದರೆ, ‘ಶಂಕರ್ ಗುರು’ ವಿನ ತ್ರಿಪಾತ್ರ ಅವರನ್ನು ಇಡೀ ಭಾರತೀಯ ಚಿತ್ರರಂಗದಲ್ಲೇ ಮೇಲ್ಪಕ್ತಿಯಲ್ಲಿ ನಿಲ್ಲಿಸಿತು. ‘ಅನುರಾಗ ಅರಳಿತು’ ಹೆಚ್ಚು ಭಾಷೆಗಳಿಗೆ ರೀಮೇಕ್ ಆಗಿ ಎಲ್ಲಾ ಭಾಷೆಗಳಲ್ಲಿಯೂ ಸೂಪರ್ ಹಿಟ್ ಆಯಿತು.

ಗಾಯನದ ವಿಷಯದಲ್ಲಿ ರಾಜ್ ಅವರಿಗೆ ಅವರೇ ಸಾಟಿ. ಇಂದು ಕೂಡ ದೇವಾಲಯಗಳಲ್ಲಿನ ಭಕ್ತಿಗೀತೆ ರಾಜ್ ಅವರದೇ ಧ್ವನಿಯಲ್ಲಿ ಇರುತ್ತದೆ. ಕನ್ನಡ ರಾಜ್ಯೋತ್ಸವ ‌ಎಂದರೆ ಅದು ರಾಜ್ ಉತ್ಸವ.

ಜನಮಾನಸದಲ್ಲಿ ಇಷ್ಟೊಂದು ಹಾಸು ಹೊಕ್ಕಾಗಿರುವ ರಾಜ್ ಕುಮಾರ್ ಈಗ ಹೆಚ್ಚು ಪ್ರಸ್ತುತವಾಗುತ್ತಿರುವುದು ಅವರ ಅದೇ ಜನಪ್ರಿಯತೆಯಿಂದ. ಈಗಲೂ ರಾಜ್ ಸಿನಿಮಾ ಪ್ರೀತಿಸಿದಂತೆ ಬೇರೆ ಯಾವ ಸಿನಿಮಾಗಳನ್ನು ಜನರು ಪ್ರೀತಿಸುವುದಿಲ್ಲ. ರಾಜ್ ನಾಡಿನ ಅನನ್ಯ ಶಕ್ತಿ, ಅವರೊಬ್ಬ ಸಂತ ಮತ್ತು ಪವಾಡ ಪುರುಷ..

Share :

About the Author

Leave a Reply

Your email address will not be published. Required fields are marked *

About our Editor

Snehapriya Nagaraj is one of the renowned film journalist with vast experience of more than 25 years in the field of film industry. Apart from being columist for many news publications he has also penned many novels. Nagaraj is honoured with many awards for his immense contribution in film media.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports