Category: ಸಿನಿ ಹನಿ
-

ಕಮಲ್ ಮರಿಯಾ ಮೈ ಡಾರ್ಲಿಂಗ್ ಮತ್ತೆ ತೆರೆಗೆ ನರೇಂದ್ರ ಬಾಬು ಕಥೆ..
ಈಗ್ಗೆ ನಲವತ್ತು ವರ್ಷಗಳ ಹಿಂದೆ ತೆರೆ ಕಂಡಿದ್ದ ಕಮಲ್ ಹಾಸನ್ ಅವರು ಮುಖ್ಯ ಪಾತ್ರದಲ್ಲಿದ್ದ ಕನ್ನಡ ಚಿತ್ರ ಮರಿಯಾ ಮೈ ಡಾರ್ಲಿಂಗ್.. ಶೀರ್ಷಿಕೆ ಹಾಡಿನಿಂದಲೇ ಹೆಚ್ಚು ಜನಪ್ರಿಯವಾಗಿದ್ದ ಬೆಲ್ ಬಾಟಮ್ ಪ್ಯಾಂಟ್ ಕಾಲದ ಆ ಚಿತ್ರದ ಹೆಸರು ಮತ್ತೆ ಹೊಸದಾಗಿ ಮೂಡಿಬರಲಿದೆ. ಅಂದ ಹಾಗೆ ಕನ್ನಡದಲ್ಲಿ ‘ಪಲ್ಲಕ್ಕಿ’, ’13’ ಹೀಗೆ ವಿಭಿನ್ನ ನೆಲೆಯ ಚಿತ್ರಗಳನ್ನು ನಿರ್ದೇಶನ ಮಾಡಿರುವ ಕೆ.ನರೇಂದ್ರಬಾಬು ಈಗ ‘ಮರಿಯಾ ಮೈ ಡಾರ್ಲಿಂಗ್’ ಶೀರ್ಷಿಕೆ ಇರುವ ಚಿತ್ರವನ್ನು ನಿರ್ದೇಶಿಸಲು ಕೈಗೆತ್ತಿಕೊಂಡಿದ್ದಾರೆ. ಅಪ್ಪಟ ಪ್ರೇಮಕಥೆಯಾಗಿರುವ ಈ ಚಿತ್ರವನ್ನು…
-

ನಿರ್ಭಯ 2 ಟೀಸರ್ ಅನಾವರಣ..
ರೆತಿಕ್ಷ ಫಿಲಂಸ್ ಬ್ಯಾನರ್ ಅಡಿಯಲ್ಲಿ ಬಾಲಕೃಷ್ಣ ಕೆ.ಆರ್ ನಿರ್ಮಿಸಿರುವ, ರಾಜು ಕುಣಿಗಲ್ ನಿರ್ದೇಶನದ ಹಾಗೂ ಶ್ರಾವ್ಯ ರಾವ್ ಪ್ರಮುಖಪಾತ್ರದಲ್ಲಿ ನಟಿಸಿರುವ ‘ನಿರ್ಭಯ 2’ ಚಿತ್ರದ ಟೀಸರ್ ಬಿಡುಗಡೆ ಕಂಡಿದೆ. ನಿರ್ಮಾಪಕ, ನಟ ರಾಕ್ ಲೈನ್ ವೆಂಕಟೇಶ್ ಹಾಗೂ ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಮಹಿಳೆಯರ ಮೇಲಿನ ಶೋಷಣೆ ತಡೆಯುವ ಕ್ರಮಗಳ ಕುರಿತ ಕಥಾಹಂದರವನ್ನು ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ರಾಜು ಕುಣಿಗಲ್ ಅವರೆ ಕಥೆ ಚಿತ್ರಕಥೆ ಬರೆದಿದ್ದಾರೆ. ಆಕಾಶ್ ಪರ್ವ…
-

ಸದ್ಯವೇ ಚಿತ್ರಮಂದಿರದಲ್ಲಿ ಆನ್ ಲೈನ್ ಮದುವೆ ಶೋಭನ..
ಚಿತ್ರವಿಚಿತ್ರ ಹೆಸರುಗಳಿಂದಲೇ ಕೆಲವು ಚಿತ್ರಗಳು ಗಮನ ಸೆಳೆಯುತ್ತವೆ. ಅಂದ ಹಾಗೆ ಈ ಚಿತ್ರದ ಹೆಸರು ‘ಆನ್ ಲೈನ್ ಮದುವೆ ಆಫ್ ಲೈನ್ ಶೋಭನ’. ಇದೊಂದು ನಕ್ಕು ನಗಿಸುವ ಚಿತ್ರವೆಂದು ಚಿತ್ರತಂಡ ಬಿಡುಗಡೆ ಮಾಡಿರುವ ಸ್ಟಿಲ್ ಗಳು ಹೇಳುತ್ತಿವೆ.. ಈ ಹಿಂದೆ ಗರ್ಭದಗುಡಿ, 141, ಅಕ್ಕಭಾವ ಬಾಮೈದ, ನೀನೇನಾ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದ ಬಾವಾಜಿ ಅವರೀಗ ಹಾಸ್ಯಪ್ರದಾನ ಕಥಾಹಂದರ ಹೊಂದಿರುವ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅಪ್ಸರ ಮೂವೀಸ್ ಬ್ಯಾನರ್ ಅಡಿಯಲ್ಲಿ ವೇಂಪಲ್ಲಿ ಬಾವಾಜಿ ಅವರೇ ನಿರ್ಮಾಣ ಮಾಡಿರುವ ಆ ಚಿತ್ರದ…
-

ತಂದೆ ಮಗ ಹೃದಯಸ್ಪರ್ಶಿ ಹರ್ಷ
ಈ ಚಿತ್ರ ತಂದೆ ಮಗನ ಸೆಂಟಿಮೆಂಟ್ ಕಥೆ ಹೇಳುತ್ತದೆ. ಮಕ್ಕಳ ಬಗ್ಗೆ ಪರಿಣಾಮಕಾರಿ ಸಂದೇಶ ನೀಡುವ ಪ್ರಯತ್ನವಿದು.. ಹಾಗೆಂದು ಹೇಳಿಕೊಂಡಿದೆ ಚಿತ್ರತಂಡ. ಸೋಮಶೇಖರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಕೊನೆಯ ಹಂತದ ಚಿತ್ರೀಕರಣ ಬಾಕಿ ಇದೆ. ಚಿತ್ರದ ಹೆಸರು ಹರ್ಷ..! ಪ್ರಮುಖ ಪಾತ್ರದಲ್ಲಿ ಮಾಸ್ಟರ್ ಹರ್ಷ ಕಾಣಿಸಿಕೊಂಡಿದ್ದು, ರಾಘವೇಂದ್ರ ಬಿ. ಮೈಸೂರು ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ರಚಿಸಿ ಸಹ ನಿರ್ದೇಶನ ಮಾಡಿದ್ದಾರೆ. ಮುಖ್ಯ ಪಾತ್ರದಲ್ಲಿ ಪ್ರಪುಲ್ ಸುರೇಂದ್ರ ನಟಿಸಿದ್ದು, ಮಾನಸಗೌಡ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.…
-

ಮೋಹನ್ ಲಾಲ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ವೃಷಭ
ದೊಡ್ಡ ಮಟ್ಟದ ಆಕ್ಷನ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಖ್ಯಾತ ನಟ ಮೋಹನ್ ಲಾಲ್ ಅಭಿನಯದ ‘ವೃಷಭ’ ಎಂಬ ಪ್ಯಾನ್ ಇಂಡಿಯಾ ಚಿತ್ರದ ಚಿತ್ರೀಕರಣ ಕಳೆದ ಭಾನುವಾರದಿಂದ ಪ್ರಾರಂಭವಾಗಿದೆ. ‘ವೃಷಭ’ ಚಿತ್ರದಲ್ಲಿ ಮೈ ಜುಂ ಎನಿಸುವಂತಹ ಆಕ್ಷನ್ ಮತ್ತು ರೋಚಕ ದೃಶ್ಯಗಳು ಇರಲಿದ್ದು, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಜೊತೆಗೆ ರೋಶನ್ ಮೇಕಾ, ಶನಾಯ ಕಪೂರ್, ಝಾರಾ ಖಾನ್, ಶ್ರೀಕಾಂತ್ ಮೇಕಾ ಮುಂತಾದವರು ನಟಿಸುತ್ತಿದ್ದಾರೆ. ಕನ್ನಡದ ರಾಗಿಣಿ ದ್ವಿವೇದಿ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ…
-

ಬ್ಯಾಡ್ ನ ಅಪೂರ್ವ ಪ್ರೀತಿ
ಪಿ.ಸಿ.ಶೇಖರ್ ನಿರ್ದೇಶನದ ಬ್ಯಾಡ್ ಚಿತ್ರದಲ್ಲಿ ಅಪೂರ್ವ ಭಾರದ್ವಾಜ್ ನಟಿಸುತ್ತಿದ್ದಾರೆ. ಕಾಮ, ಕ್ರೋಧ, ಮದ, ಮತ್ಸರ ಮೊದಲಾದ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪಾತ್ರಗಳಿರುವ ಬ್ಯಾಡ್ ಚಿತ್ರದಲ್ಲಿ ಕಾಮ ಎಂಬ ವರ್ಗವನ್ನು ಅನು ಎಂಬ ಪಾತ್ರದ ಮೂಲಕ ತೋರಿಸಲಾಗುತ್ತಿದ್ದು, ಈ ಪಾತ್ರದಲ್ಲಿ ಅಪೂರ್ವ ಭಾರದ್ವಾಜ್ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಮಾಹಿತಿ. ಈ ಚಿತ್ರದಲ್ಲಿ ಕಾಮ ಎಂಬುದು ಪ್ರೀತಿಯ ಮುಖವಾಗಿರುತ್ತದೆ. ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡು, ತಂದೆಯ ಆಸರೆಯಲ್ಲಿ ಬೆಳೆದ ಹುಡುಗಿಗೆ ಪ್ರೇಮದ ಅಭಿವ್ಯಕ್ತಿ ತಿಳಿದಿರುವುದಿಲ್ಲ. ಕಣ್ಣಿನಲ್ಲೇ ಭಾವನೆಗಳನ್ನು ಹೇಳುವ ಹಾಗೂ ಗುಂಗುರು ಕೂದಲುಳ್ಳ…
-

ಜವಾನ್; ನಯನತಾರಾ ಪೋಸ್ಟರ್..
‘ಆಕೆ ಬಿರುಗಾಳಿಗೂ ಮುಂಚೆ ಬರುವ ಗುಡುಗು’ ಹೀಗೆಂದು ಬಣ್ಣಿಸಲಾಗಿದೆ. ಅದು ‘ಜವಾನ್’ ಚಿತ್ರದ ನಯನತಾರಾ ವಿನೂತನ ಶೈಲಿಯ ಪೋಸ್ಟರ್. ಈಚೆಗೆ ಚಿತ್ರದ ಮುಖ್ಯ ಪಾತ್ರಧಾರಿ ಸ್ಟಾರ್ ನಟ ಶಾರುಕ್ ಖಾನ್ ಪೋಸ್ಟರ್ ಬಿಡುಗಡೆ ಮಾಡಿದ ಬಳಿಕ ಹೀಗೆ ಉದ್ಘಾರ ತೆಗೆದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಬಿಡುಗಡೆ ಕಂಡಿದ್ದ ಚಿತ್ರದ ಟೀಸರ್ ಅಭಿಮಾನಿಗಳಲ್ಲಿ ಪುಳಕ ತಂದಿತ್ತು. ಅದಾದ ಬಳಿಕ ಈಗ ಪೋಸ್ಟರ್ ಬಿಡುಗಡೆಗೊಂಡಿದೆ. ನಯನತಾರಾ ಅವರ ಪಾತ್ರವನ್ನು ‘ಬಿರುಗಾಳಿಗೂ ಮುಂಚೆ ಬರುವ ಗುಡುಗು’ ಎಂದು ಶಾರುಖ್ ಖಾನ್…
-

ಹೊಂದಿಸಿ ಬರೆಯಿರಿ ಟ್ರೈಲರ್
ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದಲ್ಲಿ ಇದೇ ಫೆ.10ರಂದು ಬಿಡುಗಡೆಯಾಗುತ್ತಿರುವ ‘ಹೊಂದಿಸಿ ಬರೆಯಿರಿ’ ಚಿತ್ರದ ಟ್ರೇಲರ್ ಈಚೆಗೆ ಬಿಡುಗಡೆ ಕಂಡಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಪ್ರವೀಣ್ ತೇಜ್, ಭಾವನಾ ರಾವ್, ಸಂಯುಕ್ತ ಹೊರನಾಡು, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹದೇವ್, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ ಒಳಗೊಂಡ ಕಲಾವಿದರ ತಂಡ ಈ ಚಿತ್ರದಲ್ಲಿದೆ. ಶಾಂತಿ ಸಾಗರ್ ಹೆಚ್.ಜಿ ಛಾಯಾಗ್ರಹಣ, ಜೋ ಕೋಸ್ಟ ಸಂಗೀತ ನಿರ್ದೇಶನ, ಕೆ.…
-

ಜೈ ಎಲೆಕ್ಷನ್.. ಉಪ್ಪಿ ಹಾಡು
ಡಾ.ವರದರಾಜು ಡಿ.ಎನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಮಾಡಿರುವ ‘ಪ್ರಜಾರಾಜ್ಯ’ ಚಿತ್ರಕ್ಕಾಗಿ ಯೋಗರಾಜ್ ಭಟ್ ಬರೆದಿರುವ ‘ಜೈ ಎಲೆಕ್ಷನ್ ಧನ್ ಧನಾ ಧನ್’ ಹಾಡಿಗೆ ರಿಯಲ್ ಸ್ಟಾರ್ ಉಪೇಂದ್ರ ಧನಿಯಾಗಿದ್ದಾರೆ.. ಈ ಹಾಡಿಗೆ ವಿಜೇತ್ ಮಂಜಯ್ಯ ಸಂಗೀತ ನೀಡಿದ್ದಾರೆ. ಆನಂದ್ ಆಡಿಯೋ ಮೂಲಕ ಈ ಹಾಡು ಬಿಡುಗಡೆಯಾಗಿದೆ. ಈಚೆಗೆ ಉಪೇಂದ್ರ ಹಾಡು ಬಿಡುಗಡೆಗೊಳಿಸಿ ಚಿತ್ರಕ್ಕೆ ಶುಭ ಕೋರಿದರು. ನಿರ್ಮಾಪಕ ಡಾ.ವರದರಾಜು, ನಿರ್ದೇಶಕ ವಿಜಯ್ ಭಾರ್ಗವ್ ಹಾಗೂ ಸಂಗೀತ ನಿರ್ದೇಶಕ ವಿಜೇತ್ ಮಂಜಯ್ಯ ಈ ಸಂದರ್ಭದಲ್ಲಿ ಹಾಜರಿದ್ದರು.…
-

ಧರ್ಮ ಕೀರ್ತಿರಾಜ್ ಹೊಸ ಬುಲೆಟ್
ಧರ್ಮ ಕೀರ್ತಿರಾಜ್ ಮುಖ್ಯ ಪಾತ್ರದಲ್ಲಿರುವ ‘ಬುಲೆಟ್’ ಎಂಬ ಹೊಸ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಎರಡನೇ ಹಂತಕ್ಕೆ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಬಾಲಿವುಡ್ ನಿರ್ದೇಶಕ ಹಾಗೂ ನಿರ್ಮಾಪಕ ಸತ್ಯಜಿತ್ ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಧರ್ಮ ಕೀರ್ತಿರಾಜ್ ಎದುರು ಶ್ರೀಯಾ ಶುಕ್ಲ ಅಭಿನಯಿಸುತ್ತಿದ್ದು. ಅಜಿತಾ ಜಾ, ಹಿರಿಯ ನಟಿ ಭವ್ಯ, ಬಾಲಿವುಡ್ ನ ಶಿವ, ಇಸಾಕ್ ಕಾಜಿ, ಸತ್ಯಜಿತ್, ಬೇಬಿ ಸಿದ್ ಟೈನ್, ರಾಜ ದೀಪ್, ಕಿಲ್ಲರ್ ವೆಂಕಟೇಶ್, ಶೋಭ್ ರಾಜ್ ಚಿತ್ರದ ತಾರಾಬಳಗ. ಪಿ.ವಿ.ಆರ್…
Latest News

Stay Connected
Categories
Uncategorized ಕ್ರೈಮ್-ನ್ಯೂಸ್ ಚಿತ್ರ ವಿಮರ್ಶೆ ರಾಜಕೀಯ-ವಿಶ್ಲೇಷಣೆ ವಿದ್ಯಮಾನ ಸಿನಿಮಾ-ಗಾಸಿಪ್ ಸಿನಿ ಹನಿ
Tags
About our Editor

SNEHAPRIYA NAGARAJ
Snehapriya Nagaraj is one of the renowned film journalist with vast experience of more than 25 years in the field of film industry. Apart from being columist for many news publications he has also penned many novels. Nagaraj is honoured with many awards for his immense contribution in film media.

Search the Archives
Access over the years of investigative journalism and breaking reports
You May Have Missed












