Category: ಚಿತ್ರ ವಿಮರ್ಶೆ
-

ಕೆಡಿ ಚಿತ್ರವಿಮರ್ಶೆ
ರೇಟಿಂಗ್ : 4/5 ನಿರ್ಮಾಣ : ಕೆವಿಎನ್ ಪ್ರೊಡಕ್ಷನ್ಸ್ ನಿರ್ದೇಶನ : ಜೋಗಿ ಪ್ರೇಮ್ ರೆಟ್ರೋ ನವೀನ ಮಾದರಿ ರಕ್ತವೇ ನಗ್ನ ಸುಂದರಿ.. ಇದೊಂದು ರಕ್ತ ಸಿಕ್ತ ಅಧ್ಯಾಯ. ಮಾತ್ತೆತ್ತಿದರೆ ತಲೆಗಳು ಉರುಳುತ್ತವೆ.., ಹಾಗೆ ಚಿಮ್ಮಿದ ರಕ್ತ ಮುಲಾಜಿಲ್ಲದೆ ಎದುರಿಗಿದ್ದವರ ಮುಖದ ತುಂಬೆಲ್ಲಾ ಆವರಿಸುತ್ತದೆ. ಬೇರೆ ಸಂದರ್ಭದಲ್ಲಾದರೆ ಅದು ಭಯಾನಕ. ಆದರೆ ಇಲ್ಲಿ ಕಲಾತ್ಮಕ. ಸುಮಾರು ಎಪ್ಪತ್ತರ ದಶಕದಲ್ಲಿ ಹೀಗೇ ಇದ್ದಿರಬಹುದು ಎಂದು ಸೃಷ್ಟಿ ಮಾಡಿರುವ ಮಹಾನಗರ ಮಾದರಿಯಲ್ಲಿ ಪ್ರತಿ ಕೋನದಲ್ಲಿ ಸೌಂದರ್ಯ ಕಾಣುತ್ತದೆ. ಅದು ವಿಭಿನ್ನ…
-

ಕ್ಯಾಲೆಂಡರ್ ಚಿತ್ರವಿಮರ್ಶೆ
ರೇಟಿಂಗ್ : 3/5 ನಿರ್ಮಾಣ : ಆದರ್ಶ್ ಗುಂಡುರಾಜ್ ನಿರ್ದೇಶನ : ನವೀನ್ ಶಕ್ತಿ ಋತುಚಕ್ರ ಪೂರ್ವ ಚರಿತೆ ಕಾಲಮಾನದಲ್ಲಿ ಬಳಲುವ ವನಿತೆ ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರು ಹಲವಾರು ಸಂಕಷ್ಟ ಅಥವಾ ತೊಂದರೆಗಳನ್ನು ಎದುರಿಸುತ್ತಾರೆ ಎಂಬುದು ಅನುಭವ ಮತ್ತು ವೈದ್ಯಕೀಯ ಶಾಸ್ತ್ರದ ಮೂಲಕ ನಿರೂಪಿತವಾಗಿದೆ. ಆದರೆ ಅದೇ ಋತುಚಕ್ರ ಪೂರ್ವದಲ್ಲಿನ ಆಕೆಯ ವರ್ತನೆ ಇಡೀ ಬದುಕನ್ನೇ ವಿನಾಶದ ಅಂಚಿಗೆ ದೂಡಿ ಬಿಡಬಹುದು. ಇದು ಹೇಗೆ ಎಂದು ತಿಳಿಯಲು ‘ಕ್ಯಾಲೆಂಡರ್’ ಚಿತ್ರವನ್ನು ಸಂಪೂರ್ಣ ನೋಡಲೇ ಬೇಕು.. ಒಬ್ಬ ಉತ್ತಮ…
-

ಲವ್ ಮಾಕ್ಟೇಲ್ 3 ಚಿತ್ರವಿಮರ್ಶೆ
ರೇಟಿಂಗ್ : 3.5/5 ನಿರ್ಮಾಣ : ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ನಿರ್ದೇಶನ : ಡಾರ್ಲಿಂಗ್ ಕೃಷ್ಣ ಅಪ್ಪ-ಮಗಳ ಅಕ್ಕರೆಯ ಸಕ್ಕರೆಗೆ ಭಾವನೆಗಳ ಮಾಧುರ್ಯ ಬೆಸುಗೆ.. ಒಂದೇ ಕಥೆಯ ಮುಂದುವರಿಕೆಯ ಭಾಗವನ್ನು (ಸೀಕ್ವೆಲ್) ಮತ್ತೆ ಮತ್ತೆ ಅಭಿವ್ಯಕ್ತಿಸುವುದು ಸುಲಭದ ವಿಷಯವಲ್ಲ; ಆದರೆ ಒಂದು ಲಯ ಕಂಡುಕೊಂಡ ಮೇಲೆ ಅದು ಕಷ್ಟವೂ ಅಲ್ಲ.. ಎಂದಿನಂತೆ ಹಿಂದಿನ ಭಾಗಗಳ ಮೆಲುಕು ಝಲಕ್ ಗಳ ನಡುವೆ ಆರಂವಾಗುವ ಕಥೆಯಲ್ಲಿ ತುಂಟುತನ ಮಿಶ್ರಿತ ವಾಗ್ಝರಿ ಕಾಣಿಸುತ್ತದೆ. ಇದು ಪ್ರೇಕ್ಷಕನನ್ನು ಕೊಂಚ ಕೊಂಚವೇ ಸೆಳೆಯುತ್ತ…
-

ಹಯಗ್ರೀವ ಚಿತ್ರವಿಮರ್ಶೆ
ರೇಟಿಂಗ್ : 3.5/5 ನಿರ್ಮಾಣ : ಪದ್ಮ ಸಮೃದ್ಧಿ ಮಂಜುನಾಥ್ ನಿರ್ದೇಶನ : ರಘುಕುಮಾರ್ ಓ.ಆರ್ ವಿಕ್ಷಿಪ್ತ ಕಲ್ಪನೆ; ವಿನಾಶದ ನಮೂನೆ ಮನುಷ್ಯನ ತಲೆ ಕತ್ತರಿಸಿ ಅದಕ್ಕೆ ಪ್ರಾಣಿಗಳ ತಲೆಯನ್ನು ಕಸಿ ಮಾಡಿ ಹೊಂದಿಸುವ ವಿಕ್ಷಿಪ್ತ ಕಲ್ಪನೆಯಲ್ಲಿ ತೇಲಾಡುವ (ಸೀತಿಯಲ್ ಕಿಲ್ಲರ್) ವೈದ್ಯಕೀಯ ವಿದ್ಯಾರ್ಥಿಯ ಹುಚ್ಚಾಟಗಳನ್ನು ಹತ್ತಿಕ್ಕಲು ಇರುವ ಅವತಾರ ಪುರುಷನೇ ಅರ್ಜುನ್ (ಹಯಗ್ರೀವ).. ಕಸದ ರಾಶಿಯ ನಡುವೆ ಹಂದಿ ತಲೆ ಇರುವ ಮೃತ ದೇಹವೊಂದು ಸಿಗುತ್ತದೆ. ಬಳಿಕ ಕುದುರೆ, ಎಮ್ಮೆ ತಲೆ ಮತ್ತೆ ಗಣೇಶನಂತೆ ಆನೆ…
-

ಸೂಪರ್ ಹಿಟ್ ಚಿತ್ರವಿಮರ್ಶೆ
ರೇಟಿಂಗ್ : 3.5/5 ನಿರ್ಮಾಣ : ಜಿ.ಉಮೇಶ್ ನಿರ್ದೇಶನ : ವಿಜಯಾನಂದ್ ಆಗಸಕ್ಕೆ ತೆರೆದಿಟ್ಟ ಪಯಣ.. ಇದೊಂದು ಮಿಕ್ಕಿ ಮೌಸ್ ಮಾದರಿಯ ಕಥೆ; ಒಂದಕ್ಕೊಂದು ಸಂಬಂಧ ಮತ್ತು ಸಂಪರ್ಕವಿದ್ದರೂ ಯಾವುದೂ ಕೈಗೆ ನಿಲುಕುವುದಿಲ್ಲ. ಒಂದು ಸುಂದರವಾದ ಕಾರು. ಅದರಲ್ಲಿ ಅಹಲ್ಯ, ಸತ್ಯ ಮತ್ತು ಭೂಪತಿಯ ಪಯಣ.. ದಾರಿಯಲ್ಲಿ ಸಿಗುವ ಮದುವೆ ಜೋಡಿ ಮತ್ತು ದಿಬ್ಬಣ.. ಅಸಾಧ್ಯ ಮಾತುಗಾರ ಭೂಪತಿ, ಕುಳಿತಲ್ಲೇ ರೀಲ್ಸ್ ಕಥೆ ಕಟ್ಟುವ ಸತ್ಯ ಹಾಗೂ ಇಬ್ಬರಿಗೂ ಚಮಕ್ ನೀಡುವ ಅಪ್ಸರ ಮೂವರನ್ನು ಹೊತ್ತ ಕಾರು…
-

ಸರಳ ಸುಬ್ಬರಾವ್ ಚಿತ್ರವಿಮರ್ಶೆ
ರೇಟಿಂಗ್ : 3.5/5 ನಿರ್ಮಾಣ : ಲೋಹಿತ್ ನಂಜುಂಡಯ್ಯ ನಿರ್ದೇಶನ : ಮಂಜು ಸ್ವರಾಜ್ ಭಾವ ಬೆಡಗಿನ ಸಂಸಾರ ಕಾಲಾತೀತ ಸಂಸ್ಕಾರ.. ಸಂಸಾರವೆಂದರೆ ಅದೊಂದು ಭಾವ ಬೆಡಗು.. ಜೀವನದ ಉದ್ದಕ್ಕೂ ಒಲುಮೆ ಮತ್ತು ನಲುಮೆ ಕಡಿಮೆಯಾಗದಂತೆ ಪ್ರೇಮಿಸುವುದು ಎಂದರೆ ದೂರದ ಬೆಟ್ಟದ ಹಸಿರು; ಅದು ನಿತ್ಯ ಹರಿದ್ವರ್ಣದ ಕಾಡಿನಂತೆ.. ಸುಬ್ಬರಾವ್ ಮತ್ತು ಸರಳ ಪ್ರೇಮವೆಂದರೆ ಅದೊಂದು ಸೊಗಸು.. ಕ್ಷಣ ಕ್ಷಣವೂ ಕಾಣುವ ಬೆಡಗು. ಅಕ್ಷರಶಃ ತಿಂಡಿ ಪೋತಿಯಾದ ಸರಳಳ ಮುಗ್ಧತೆ ನವಿರು ಭಾವವನ್ನು ಪೋಷಿಸುತ್ತದೆ. ಸುಬ್ಬರಾವ್ ಅವಳ…
-

ಆಲ್ಫಾ ಚಿತ್ರವಿಮರ್ಶೆ
ರೇಟಿಂಗ್ : 3.5/5 ನಿರ್ಮಾಣ : ಆನಂದ್ ಕುಮಾರ್ ನಿರ್ದೇಶನ : ವಿಜಯ್ ಹಣ ಮಾಡುವ ಮಾದಕ ವ್ಯಸನದ ಸುತ್ತ.. ಸಾಮಾಜಿಕವಾಗಿ ಡ್ರಗ್ ಮಾಫಿಯಾ ವಿಶಾಲವಾದ ನೆಲೆಯನ್ನು ಕಂಡುಕೊಂಡಿದೆ. ಅದರ ವಿಸ್ತಾರ ಕಬಂಧ ಬಾಹು ಯುವ ಸಮೂಹದ ನೆಮ್ಮದಿಯನ್ನು ಕಬಳಿಸುತ್ತಿದೆ. ಕೋಟಿ ಕೋಟಿ ವ್ಯವಹಾರದ ಡ್ರಗ್ ಮಾಫಿಯಾ ಈ ಬಗೆಯಲ್ಲಿ ನೆಲೆಯನ್ನು ಕಂಡುಕೊಳ್ಳುವುದಕ್ಕೆ ಪೊಲೀಸ್ ವ್ಯವಸ್ಥೆ ನೆರವಾಗಿದೆ ಎಂಬ ಪ್ರತಿಪಾದನೆ ಬಹಳ ಹಿಂದಿನಿಂದಲೂ ಇದೆ. ಇದೇ ಡ್ರಗ್ ಮಾಫಿಯಾ ಮತ್ತು ಅದರ ಡಾನ್ ಗಳ ಸುತ್ತ ನಡೆಯುವ…
-

ಸೀತಾ ಪಯಣ ಚಿತ್ರವಿಮರ್ಶೆ
ರೇಟಿಂಗ್ : 4/5 ನಿರ್ಮಾಣ ಮತ್ತು ನಿರ್ದೇಶನ : ಅರ್ಜುನ್ ಸರ್ಜಾ ಭಾವುಕ ಪಯಣ ಪ್ರೇಮದ ಕುಲುಮೆ ಕುಟುಂಬ ಪ್ರೀತಿ ಎಂಬುದು ಕಾಲಾನುಕಾಲಕ್ಕೆ ಬದಲಾಗುತ್ತದೆ. ಸ್ವಾರ್ಥದ ನೆಲೆಯಲ್ಲಿ ಕೌಟುಂಬಿಕ ಮೌಲ್ಯ ನಶಿಸುತ್ತ ಹೋಗುತ್ತದೆ.. ಕುಟುಂಬದ ಪ್ರೀತಿ ಮತ್ತು ಕೌಟುಂಬಿಕ ಮೌಲ್ಯದ ನೆಲೆಯನ್ನು ಅದೇ ಪ್ರೇಮದ ಜಾಡಿನಲ್ಲಿ ಹುಡುಕಾಡಿರುವ ಪ್ರಯತ್ನವೇ ಸೀತಾ ಪಯಣ.. ಅಪ್ಪನ ಪ್ರೀತಿಯಲ್ಲಿ ಮಿಂದೆದ್ದು ಭಯ ಮಿಶ್ರಿತ ಬದುಕಿನಲ್ಲಿಯೂ ಸಾಹಸಿ ಯಾಗಲು ಹೋಗುವ ಸೀತಾ, ಅದಮ್ಯ ಚೈತನ್ಯ ಮತ್ತು ಪ್ರೇಮ ಸಹಿತ ಭಾವನೆಯಲ್ಲಿ ಮಿಂದೇಳುವವಳು.. ಆಕೆಯ…
-

ಸುಖಿ ಭವ ಚಿತ್ರವಿಮರ್ಶೆ
ರೇಟಿಂಗ್ : 3/5 ನಿರ್ಮಾಣ : ಸಂತೋಷ್ ಕುಮಾರ್, ಭಾರ್ಗವಿ ಸಂತೋಷ್ ನಿರ್ದೇಶನ : ಎನ್.ಕೆ.ರಾಜೇಶ್ ನಾಯ್ಡು ಪ್ರೇಮ ಸಂವೇದನೆಯ ಶಕ್ತಿ ನಿರೂಪಣೆ.. ಪ್ರೇಮ ಮಧುರಾಕ್ಷರ; ಪ್ರೇಮ ಅಜರಾಮರಾ ಎಂಬುದು ನಿಜವಾದರೂ ಕಾಲದ ನಿರಂತರತೆಯಲ್ಲಿ ಪ್ರೇಮವೆಂಬುದು ಮರೆವಿಗೆ ಆಹಾರವಾಗುವುದೇ ಹೆಚ್ಚು.. ಬಾಲ್ಯದ ಪ್ರೇಮದ ನೆನಪು ಮತ್ತು ಸವಾಲು ಒಬ್ಬ ಬಲಾಢ್ಯ ವ್ಯಕ್ತಿಯನ್ನು ರೂಪಿಸುತ್ತದೆ ಮಾತ್ರವಲ್ಲ; ಸಂಬಂಧಗಳ ನೆಲೆ ಅಲ್ಲಾಡದಂತೆ ಕಾಪಾಡುತ್ತದೆ.. ಬಾಲ್ಯದಲ್ಲಿ ಪೋಲಿ ಮತ್ತು ಒರಟನಂತ್ತಿದ್ದ ವೈಭವ್, ಮುಂದೆ ಪ್ರೇಮಿಯ ಆಶಯದಂತೆ ಸವಾಲುಗಳನ್ನು ಮೆಟ್ಟಿ ನಿಲ್ಲುವ ಮಟ್ಟಕ್ಕೆ…
-

ಲ್ಯಾಂಡ್ ಲಾರ್ಡ್ ಚಿತ್ರವಿಮರ್ಶೆ
ರೇಟಿಂಗ್ : 4/5 ನಿರ್ಮಾಣ : ಕೆ.ವಿ.ಸತ್ಯಪ್ರಕಾಶ್, ಹೇಮಂತ್ ಗೌಡ ಕೆ.ಎಸ್. ನಿರ್ದೇಶನ : ಜಡೇಶ್ ಕೆ.ಹಂಪಿ ಸಮಾನತೆಗಾಗಿ ಹೋರಾಟದ ಕಿಚ್ಚು ದಲಿತ ಸಮುದಾಯದಿಂದ ಬಂದು ಐಪಿಎಸ್ ಅಧಿಕಾರಿಯಾಗಿದ್ದ ಸುಭಾಷ್ ಭರಣಿ ಅವರು ಬಳ್ಳಾರಿ ಎಸ್ಪಿ ಆಗಿದ್ದಾಗ, ದೇವದಾಸಿ ಪದ್ಧತಿ ಮತ್ತು ಹೆಣ್ಣು ಮಕ್ಕಳ ಮೇಲೆ ಬಣ್ಣದ ನೀರು ಎರಚುವ ಹೀನ ಆಚರಣೆಗಳನ್ನು ನಿಷೇಧಿಸುವಂತೆ ಮಾಡಿದ್ದೂ ಅಲ್ಲದೆ. ಅದಕ್ಕೆ ಕಾರಣರಾದವರನ್ನು ಮಟ್ಟ ಹಾಕಿದ್ದರು. ಆಗ ಅದು ಸಾಧಾರಣ ವಿಷಯವೇ ಅಲ್ಲ; ಜಮೀನ್ದಾರಿ ಪದ್ಧತಿ ಮತ್ತು ಅದರ ದರ್ಪಗಳನ್ನು…
Latest News

Stay Connected
Categories
Uncategorized ಕ್ರೈಮ್-ನ್ಯೂಸ್ ಚಿತ್ರ ವಿಮರ್ಶೆ ರಾಜಕೀಯ-ವಿಶ್ಲೇಷಣೆ ವಿದ್ಯಮಾನ ಸಿನಿಮಾ-ಗಾಸಿಪ್ ಸಿನಿ ಹನಿ
Tags
About our Editor

SNEHAPRIYA NAGARAJ
Snehapriya Nagaraj is one of the renowned film journalist with vast experience of more than 25 years in the field of film industry. Apart from being columist for many news publications he has also penned many novels. Nagaraj is honoured with many awards for his immense contribution in film media.

Search the Archives
Access over the years of investigative journalism and breaking reports
You May Have Missed












