ಕೆಡಿ ಚಿತ್ರವಿಮರ್ಶೆ

ರೇಟಿಂಗ್ : 4/5 ನಿರ್ಮಾಣ : ಕೆವಿಎನ್ ಪ್ರೊಡಕ್ಷನ್ಸ್ ನಿರ್ದೇಶನ : ಜೋಗಿ ಪ್ರೇಮ್ ರೆಟ್ರೋ ನವೀನ ಮಾದರಿ ರಕ್ತವೇ ನಗ್ನ ಸುಂದರಿ.. ಇದೊಂದು ರಕ್ತ ಸಿಕ್ತ ಅಧ್ಯಾಯ. ಮಾತ್ತೆತ್ತಿದರೆ ತಲೆಗಳು ಉರುಳುತ್ತವೆ.., ಹಾಗೆ..

Share :

ರೇಟಿಂಗ್ : 4/5

ನಿರ್ಮಾಣ : ಕೆವಿಎನ್ ಪ್ರೊಡಕ್ಷನ್ಸ್

ನಿರ್ದೇಶನ : ಜೋಗಿ ಪ್ರೇಮ್

ರೆಟ್ರೋ ನವೀನ ಮಾದರಿ
ರಕ್ತವೇ ನಗ್ನ ಸುಂದರಿ..

ಇದೊಂದು ರಕ್ತ ಸಿಕ್ತ ಅಧ್ಯಾಯ. ಮಾತ್ತೆತ್ತಿದರೆ ತಲೆಗಳು ಉರುಳುತ್ತವೆ.., ಹಾಗೆ ಚಿಮ್ಮಿದ ರಕ್ತ ಮುಲಾಜಿಲ್ಲದೆ ಎದುರಿಗಿದ್ದವರ ಮುಖದ ತುಂಬೆಲ್ಲಾ ಆವರಿಸುತ್ತದೆ. ಬೇರೆ ಸಂದರ್ಭದಲ್ಲಾದರೆ ಅದು ಭಯಾನಕ. ಆದರೆ ಇಲ್ಲಿ ಕಲಾತ್ಮಕ.

ಸುಮಾರು ಎಪ್ಪತ್ತರ ದಶಕದಲ್ಲಿ ಹೀಗೇ ಇದ್ದಿರಬಹುದು ಎಂದು ಸೃಷ್ಟಿ ಮಾಡಿರುವ ಮಹಾನಗರ ಮಾದರಿಯಲ್ಲಿ ಪ್ರತಿ ಕೋನದಲ್ಲಿ ಸೌಂದರ್ಯ ಕಾಣುತ್ತದೆ. ಅದು ವಿಭಿನ್ನ ರೆಟ್ರೋ ಮಾದರಿಯಾಗಿ ಕಂಗೊಳಿಸುತ್ತದೆ.

ಪ್ರೇಮ್ ಇಲ್ಲಿ ಒಬ್ಬ ದುರ್ಬಲ ಕಥಾ ನಾಯಕನನ್ನು ಸೃಷ್ಟಿ ಮಾಡಿದ್ದಾರೆ. ಆತ ಥೇಟ್ ಪ್ರೇಮ್ ಅವರಂತೆಯೇ (ಸ್ಟಾರ್ ಗಳ) ಆರಾಧಕ. ಪಾತಕಿ ಧಕ್ ದೇವನನ್ನು ಆರಾಧಿಸುತ್ತಾನೆ. ಸೀಮೆ ಎಣ್ಣೆ ವ್ಯಾಪಾರ ಮಾಡುತ್ತಾ ಎಲ್ಲರಿಗೂ ಮನರಂಜನೆ ನೀಡುತ್ತಾನೆ; ಹೆಸರು ಕಾಳಿದಾಸ..

ಗರಡಿ ಮನೆಗೆ ಹಾಲು ಪೂರೈಕೆ ಮಾಡುತ್ತ ಅಲ್ಲಿದ್ದವರಿಗೆ ಪಟ್ಟುಗಳ ಬಗ್ಗೆ ಹೇಳಿಕೊಡುವ ಮುಗ್ಧ ವರಸೆ ತೋರುತ್ತಾನೆ. ಅಷ್ಟರಲ್ಲಿ ಪರಿಚಯವಾಗುವುದೇ ಬಜಾರಿಯಂತಹ ಸುಂದರ ಹುಡುಗಿ..

ಆಕೆಯ ಹೆಸರು ಲಕ್ಷ್ಮಿ. ಕಾಳಿದಾಸ ಮತ್ತು ಲಕ್ಷ್ಮಿ‌ ಇಬ್ಬರೂ ಜಿದ್ದಿಗೆ ಬಿದ್ದವರಂತೆ ಬಾಯಿ ತುಂಬಾ ಜಗಳವಾಡುತ್ತಾರೆ. ಆಗ ಉದುರುವ ಸಂಭಾಷಣೆಗಳು ಪಕ್ಕಾ ಡಬ್ಬಲ್ ಮೀನಿಂಗ್. (ಉದಾಹರಣೆ ; ಉದ್ದ ಇದ್ರೆ ಊರ್ ತುಂಬಾ ನಿಗರ್ ಸ್ಕೊಂಡು ಹೋಗು) ಅದಷ್ಟೇ ಮನರಂಜನೆ ವಿಷಯಗಳು. ಉಳಿದಂತೆ ಬೇಕಾದಷ್ಟು ಆಕಳಿಕೆ ಸಂದರ್ಭಗಳು..

ಪಾತಕಿ‌ ದೇವ ಕಾಳಿದಾಸನ ಕುಟುಂಬ ನಾಶ ಮಾಡುವ ಕುರಿತು ಆಜ್ಞೆ ಮಾಡುವವರೆಗೂ ಕಾಳಿದಾಸ ಮುಗ್ಧ. ಆತನನ್ನು ಬಡಿದೆಬ್ಬಿಸುವುದು ಸ್ವತಃ ಅಣ್ಣನೇ ಹೇಳುವ ಭಗವದ್ಗೀತೆ ಶ್ಲೋಕ.. ಅಲ್ಲಿಯವರೆಗೂ ಪ್ರೇಕ್ಷಕನಿಗೆ ತಾಳ್ಮೆಯ ಪರೀಕ್ಷೆ ಆಗುತ್ತದೆ.

ಮುಂದೆ ನಡೆಯುವ ಮಚ್ಚಿನ ಆರ್ಭಟದಲ್ಲಿ ರಾಶಿ ರಾಶಿ ಪುಡಿ ರೌಡಿಗಳನ್ನು ಕೊಚ್ಚಿ ಕೆಡವುತ್ತಾನೆ ಕಾಳಿದಾಸ. ಅಲ್ಲಿ ಚಿಮ್ಮುವ ರಕ್ತದೋಕುಳಿ ಪ್ರೇಕ್ಷಕನ ಮುಖಕ್ಕೂ ಚಿಮ್ಮಿದಷ್ಟೇ ಭಯಾನಕ-ಆತಂಕ.

ಅಣ್ಣ ಧರ್ಮನ ಮುಖಕ್ಕೂ ಅಪ್ಪಳಿಸುವ ರಕ್ತ ಯಾವ ಮಾದರಿಯೋ.. ಸೆನ್ಸಾರ್ ಮಂಡಳಿ ಇದನ್ನೆಲ್ಲಾ ಹೇಗೆ ಬಿಟ್ಟಿತೋ ಎಂದು ಅಚ್ಚರಿಯಾಗುತ್ತದೆ.

ಅಣ್ಣಯಪ್ಪ ಆಗಿರುವ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ನಿಜಕ್ಕೂ ಏನು ಎಂಬುದು ಮುಂದಿನ ಭಾಗದವರೆಗೂ ಕಾಯಬೇಕು. ಸತ್ಯವತಿ ಧರ್ಮ ನಡುವಿನ ಪ್ರೇಮ ಏನು ಎಂಬುದೂ ಕುತೂಹಲ. ಕಾಲಭೈರವ (ಸುದೀಪ್) ನಿಜಕ್ಕೂ ಮುಂದೆ ಅಬ್ಬರಿಸಬಹುದೇ.. ಈ ಎಲ್ಲಾ ಕುತೂಹಲ ಹುಟ್ಟು ಹಾಕಿರುವುದು ಎರಡನೇ ಭಾಗದ ಲೀಡ್..

ಆದರೆ..

ದೊಡ್ಡ ಮಟ್ಟದಲ್ಲಿ ಸೆಟ್ ಹಾಕಿ ಮಾಡಿರುವ ರೆಟ್ಟೋ ಮಾದರಿ ನಿಜಕ್ಕೂ ಕಣ್ಮನ ಸೆಳೆಯುತ್ತದೆ. ‘ಗುರುವೆ ನಿನ್ನಾಟ ಬಲ್ಲೋರ್ ಯಾರ್ಯೋರೋ..’ ಎಂಬುದು ಅದ್ಭುತ ಕಲಾತ್ಮಕ ಸೃಷ್ಟಿಯಂತೆ ಕಾಣುತ್ತದೆ. ‘ಸೆಟ್ಟಾಗೊಲ್ಲಾ ನಂಗು ನಿಂಗು..’ ರೆಟ್ರೋ ಮಾದರಿಯ ಅದ್ಭುತ ಝಲಕ್. ಅರ್ಜುನ್ ಜನ್ಯ ಹಾಡುಗಳು ಹಿನ್ನೆಲೆ ಸಂಗೀತ ಎರಡರಲ್ಲೂ ಅಬ್ಬರಿಸಿದ್ದಾರೆ.

ಮೋಹನ್ ಬಿ.ಕೆರೆ ಸೃಷ್ಟಿಸಿರುವ 70-80ರ ದಶಕದ ಬೆಂಗಳೂರನ್ನು ಅಷ್ಟೇ ಕಲಾತ್ಮಕವಾಗಿ ಸೆರೆ ಹಿಡಿದಿರುವುದು ವಿಲಿಯಂ ಡೇವಿಡ್ ಕ್ಯಾಮೆರಾ ಅದ್ಭುತ ಕಲಾತ್ಮಕ ಸೃಷ್ಟಿ.

ರವಿಶಂಕರ್ ಮೂಲಕ ಪ್ರೇಮ್ ಕಥೆ ಹೇಳುವ ರೀತಿ ಭಯಾನಕ. ದೇವರಾಜ ಅರಸ್ಸು ಅಥವಾ ಗುಂಡೂರಾವ್ ಅವರ ಕಾಲದಲ್ಲಿ ಪೊಲೀಸರು ಅಷ್ಟೊಂದು ಅಸಹಾಯಕರೇ.. ವ್ಯವಸ್ಥೆ ಇಷ್ಟೊಂದು ದುರ್ಬಲವೇ ಎಂಬ ಪ್ರಶ್ನೆ ಕಾಡಿದರೂ ಇದೊಂದು ಸಿನಿಮಾ ಮಾದರಿಯಷ್ಟೇ ಎಂದು ಸಮಾಧಾನ ಪಟ್ಟುಕೊಳ್ಳಬೇಕಾಗುತ್ತದೆ..

ವಿಎಫ್ ಎಕ್ಸ್ ಅಥವಾ ಎಐ ಮೂಲಕ ಆವರಿಸುವ ಬೆಂಕಿ ಯಾರಿಗೂ ಏನೂ ಮಾಡುವುದಿಲ್ಲ. ಹಾಗಾಗಿ ಮನೆಯಲ್ಲಿ ಬೆಂಕಿ ಹೊತ್ತಿಕೊಂಡರೆ ಮನೆಯಲ್ಲಿ ಯಾರೂ ಆತಂಕ ಪಡುವುದಿಲ್ಲ; ರೈಲ್ಲಿನಲ್ಲಿ ಆತಂಕದ ಮಾತೇ ಇಲ್ಲ..!

ಧ್ರುವ ಸರ್ಜಾ ಎಂದಿನಂತೆ ಲೀಲಾಜಾಲವಾಗಿ ಮಾತನಾಡುವ ವರಸೆ ಮತ್ತು ಸಾಹಸ ದೃಶ್ಯಗಳಲ್ಲಿ ಹಾಗೆಯೇ ಹಾಡುಗಳಲ್ಲಿ ಕಾಣುವ ವಿಶೇಷ ನೃತ್ಯಗಳಲ್ಲಿ ಮಿಂಚಿದ್ದಾರೆ. ರೀಷ್ಮಾ ನಾಣಯ್ಯ ಪಾತ್ರದ ಬಜಾರಿತನ ಕೊಂಚ ಅತಿಯಾಯಿತು ಎನಿಸುತ್ತದೆ. ರಮೇಶ್ ಅರವಿಂದ್ ಅವರ ವಿಶೇಷ ಕೇಶ ವಿನ್ಯಾಸ ಗಮನ ಸೆಳೆಯುತ್ತದೆ. ವಿ.ರವಿಚಂದ್ರನ್ ಪಾತ್ರದ ಸ್ಪಷ್ಟತೆಯೇ ಸಿಗುವುದಿಲ್ಲ. ಶಿಲ್ಪಾಶೆಟ್ಟಿ ಏಕೋ (ವಯಸ್ಸಿನ ಭಾರ) ಮಂಕಾಗಿ ಕಾಣುತ್ತಾರೆ.

ಕವಿ ಹೆಸರಿನ ಮರಿ ರೌಡಿಯಾಗಿ ಯಶ್ ಶೆಟ್ಟಿ ಅಬ್ಬರ ಜೋರಾಗಿದೆ. ಸುಚ್ಚೇಂದ್ರ ಪ್ರಸಾದ್ ಉತ್ತರ ಕರ್ನಾಟಕದ ಖಡಕ್ ಭಾಷೆಯಲ್ಲಿ ಗಮನ ಸೆಳೆಯುತ್ತಾರೆ..ಆದರೆ ಶೋಭರಾಜ್ ಪಾತ್ರದಲ್ಲಿ ಎದ್ದು ಕಾಣುವುದಿಲ್ಲ..

Share :

About the Author

Leave a Reply

Your email address will not be published. Required fields are marked *

About our Editor

Snehapriya Nagaraj is one of the renowned film journalist with vast experience of more than 25 years in the field of film industry. Apart from being columist for many news publications he has also penned many novels. Nagaraj is honoured with many awards for his immense contribution in film media.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports