
ರೇಟಿಂಗ್ : 3/5
ನಿರ್ಮಾಣ : ಪೋಲಾ ಪ್ರವೀಣ್
ನಿರ್ದೇಶನ : ಗುರುಮೂರ್ತಿ ವಿ
ದೇವರಿಗೇ ವಂಚಿಸುವ
ದುಷ್ಟ ಕೂಟ ಸಂಹಾರ..

ರಿಯಲ್ ಎಸ್ಟೇಟ್ ಮಾಫಿಯಾ ಅತ್ಯುತ್ತಮ ಕೆಲಸಗಳಿಗೆ ಅಡ್ಡಗಾಲು ಹಾಕುತ್ತದೆ. ಇಲ್ಲಿ ದುಷ್ಟಕೂಟವೊಂದು ದೇವರ ಶಕ್ತಿಯನ್ನೇ ದುರ್ಬಳಕೆ ಮಾಡುತ್ತದೆ..
ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಬೇಕೆಂಬ ಯುವ ಶಕ್ತಿಯ ಗುಂಪಿಗೆ ಸದಾ ಕಾಲವೂ ಅಡೆ ತಡೆ ಎದುರಾಗುತ್ತದೆ. ಅದೂ ಕ್ರೌರ್ಯದ ಒಡೆಯನಂತ್ತಿರುವ ವ್ಯಕ್ತಿಯೊಬ್ಬನಿಂದ..
ಆತ ಅಮರನಾಥ ರಾಜೇಶ. ಆತನಿಗೆ ಒಂದು ಹಿನ್ನೆಲೆಯೂ ಇರುತ್ತದೆ. ಅದು ಅತ್ಯಂತ ಕ್ರೌರ್ಯ ಮೆರೆದ ರಣ ಪ್ರಪಂಚ. ಇಲ್ಲಿ ಯಲ್ಲಮ್ಮನ ಭಕ್ತರಾದ ಮಂಗಳ ಮುಖಿರನ್ನೇ ಸಂಹಾರ ಮಾಡಿದ ಕಥೆ ಮತ್ತು ಅವರೇ ಕ್ಷುದ್ರ ಶಕ್ತಿಗಳಾಗಿ ರಾಜೇಶನನ್ನು ಮುಗಿಸುವ ದೃಶ್ಯಗಳು ಚಿತ್ರದಲ್ಲಿ ಮುಖ್ಯಾಂಶ..
ಆದರೆ ನಿಂಬೆ ಹಣ್ಣು ಬುಗುರಿಯಂತೆ ಸುತ್ತುವ, ದೆವ್ವದ ಕೈಗಳು ಜನರನ್ನು ಹೆದುರಿಸುವ; ಮಚ್ಚೆ ಮೂಲಕ ವ್ಯಕ್ತಿಯನ್ನು ದೈವವಾಗಿಸುವ ಮೌಢ್ಯಗಳಿಂದ ಚಿತ್ರವು ತುಂಬಿ ಹೋಗಿರುವುದು ಪ್ರಶ್ನಾರ್ಹ..

ಮಾಲಾಶ್ರೀ ಅವರು ಮುಖ್ಯ ಪಾತ್ರದಲ್ಲಿದ್ದ ‘ಮಾರಕಾಸ್ತ್ರ’ ದಂತಹ ಚಿತ್ರ ನೀಡಿದ್ದ ನಿರ್ದೇಶಕ ಗುರುಮೂರ್ತಿ ಈ ಬಾರಿ ಸಂಪೂರ್ಣ ಮೌಢ್ಯಕ್ಕೆ ಹೊಂದಿಕೊಂಡು ಕಥೆ ಮಾಡಿದ್ದಾರೆ.
ಆದರೆ ಇಡೀ ಚಿತ್ರದಲ್ಲಿ ಸಾಹಸ ದೃಶ್ಯಗಳೇ ಗಮನ ಸೆಳೆಯುತ್ತವೆ. ಹಾಗಾಗಿ ಉತ್ತರಾರ್ಧದಲ್ಲಿ ಚಿತ್ರಕ್ಕೊಂದು ವೇಗವಿದೆ. ಅದು ಮೌಢ್ಯವಾದರೂ ಮನರಂಜನೆಗೆ ಹೆಚ್ಚು ಒತ್ತು ನೀಡಿದೆ.
ಮಂಗಳಮುಖಿಯರ ಪಾತ್ರಗಳು ಮತ್ತು ಯಲ್ಲಮ್ಮ ಹಾಡು ಗಮನ ಸೆಳೆಯುತ್ತದೆ. ಹಾಗಾಗಿ ರಾಘವೇಂದ್ರ, ನೀತು ವನಜಾಕ್ಷಿ, ನಿಖಿತಾಸ್ವಾಮಿ, ಚಾಂದಿನಿ ಬಳ್ಳಾರಿ ಮೊದಲಾದ ಪಾತ್ರಗಳು ವಿಜೃಂಭಿಸುತ್ತವೆ.
ಹಾಗೆಯೇ ರಾಜ್ ದೀಪಕ್ ಶೆಟ್ಟಿ, ಬ.ಲ.ರಾಜವಾಡಿ ಮೊದಲಾದ ಪಾತ್ರಗಳು ಗಮನಾರ್ಹ. ಆದರೆ ಮುಖ್ಯ ಪಾತ್ರದಲ್ಲಿರುವ ಯುವರಾಜ್ ಗೌಡ ಮತ್ತು ಖ್ಯಾತಿ ಪಾತ್ರಗಳೇ ಸಪ್ಪೆ ಎನಿಸಿತ್ತವೆ.
ಮಂಜು ಕವಿ ಸಂಗೀತ, ಪ್ರದ್ಯುತ್ತನ್ ಹಿನ್ನೆಲೆ ಸಂಗೀತ, ಮೈಸೂರು ಸ್ವಾಮಿ ಛಾಯಾಗ್ರಹಣ ಚಿತ್ರಕ್ಕೆ ಪೂರಕ..
















