
ರೇಟಿಂಗ್ : 3/5
ನಿರ್ಮಾಣ : ಸುದರ್ಶನ್ ಸುಂದರ್ ರಾಜ್
ನಿರ್ದೇಶನ : ಪ್ರಸಿದ್ದ್
ಅನಾಥ ಹೆಣಗಳ ಲೆಕ್ಕ
ದುರ್ಬಲ ಪೊಲೀಸ್ ಪಕ್ಕ

ಅಲ್ಲಿ ಅನಾಥ ಹೆಣಗಳು ಬೀಳುತ್ತಲೇ ಇರುತ್ತವೆ.. ಆದರೆ ಅವುಗಳ ಲೆಕ್ಕ ಕೇಳುವಲ್ಲಿ ಪೊಲೀಸ್ ವ್ಯವಸ್ಥೆಯೂ ಪಕ್ಕಾ ಇರುವುದಿಲ್ಲ..
ಇಂತಹ ಸಂದರ್ಭದಲ್ಲಿ ಹುಟ್ಟಿಕೊಳ್ಳುವ ಅನಾಥ ಹುಡುಗ ಶಿವು. ಆತನೇ ಈ ಕಥೆಯ ಶೇರ್..
ಹೊಡೆದಾಟ ಬಡಿದಾಟದಲ್ಲಿ ಶಿವುನನ್ನು ಮೀರಿಸುವವರೇ ಇಲ್ಲ. ತರಲೇ ರೌಡಿಗಳನ್ನು ಕುಟ್ಟಿ ಪುಡಿ ಮಾಡುವ ಶಿವುಗೆ ಇದ್ದಕ್ಕಿದಂತೆ ದೊರೆಯುವ ಹುಡುಗಿಯ ಸ್ನೇಹ ಮೈ ಮರೆಸುತ್ತದೆ.
ಆದರೆ ಅದು ವಂಚನೆಯ ಆಟವೆಂಬುದು ಕೊನೆಗೆ ತಿಳಿಯುತ್ತದೆ. ಆದರೆ ಅತ್ಯಂತ ಬಲಶಾಲಿಯಾದ ಶಿವು ಯಾವುದಕ್ಕೂ ಅಂಜದೆ ಎಲ್ಲವನ್ನು ಸವಾಲಾಗಿ ಸ್ವೀಕರಿಸುತ್ತಾನೆ. ಇದೇ ವೇಳೆ ಅನಾಥ ಹೆಣಗಳ ಕುರಿತ ಬೇರೊಂದು ಕಥೆ ಬಿಚ್ಚಿಕೊಳ್ಳುತ್ತದೆ.
ಅತ್ಯಂತ ದುರ್ಬಲವಾಗಿರುವ ಪೊಲೀಸ್ ವ್ಯವಸ್ಥೆಯನ್ನು ಯಾಮಾರಿಸಿ ನಡೆಯುವ ಅಂಗಾಂಗಗಳ ಮಾರಾಟ ದಂಧೆಯ ಕರಾಳ ಮತ್ತು ನಿಗೂಢ ವಿಷಯಗಳು ಬಿಚ್ಚಿಕೊಳ್ಳುವ ಹೊತ್ತಿಗೆ ಹತ್ತಿರದಲ್ಲೇ ಇರುವ ಆತ್ಮೀಯರಿಂದ ಇಂತಹ ಕೃತ್ಯ ನಡೆಯುತ್ತಿವೆ ಎಂಬ ಸತ್ಯದ ಅರಿವಾಗುತ್ತದೆ.
ಮುಂದೆ ನಡೆಯುವುದು ಮಾರಿ ಹಬ್ಬ. ಮಾರ್ಕೇಟ್ ನಲ್ಲಿ ಅಣ್ಣಮ್ಮ ಉತ್ಸವ ನಡೆಯುವ ಹೊತ್ತಿಗೆ ದುಷ್ಟರ ಸಂಹಾರ ಕೂಡ ನಡೆಯುತ್ತದೆ. ಇದೇ ವೇಳೆ ಬಲಿದಾನದ ಆಟಗಳು ಜರಗುತ್ತವೆ.

ಶಿವು ಪಾತ್ರದಲ್ಲಿ ಕಿರಣ್ ರಾಜ್ ನಟನೆಗಿಂತ ಸಾಹಸ ದೃಶ್ಯಗಳಲ್ಲಿ ವಿಜೃಂಭಿಸುತ್ತಾರೆ. ಅವರ ಎದುರು ಸುರೇಖ ಕಾಣಿಸಿಕೊಂಡಿದ್ದು, ತನಿಷಾ ಕುಪ್ಪಂಡ ಪೊಲೀಸ್ ಇನ್ಸ್ ಪೆಕ್ಟರ್ ಪಾತ್ರದಲ್ಲಿ ಮಿಂಚಿದ್ದಾರೆ.
ಖಳನಾಗಿ ಕ್ರಿಷ್ (ಗಿಲ್ಲಿ) ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಯಶ್ ಶೆಟ್ಟಿ, ಶೋಭ ರಾಜ್, ಬಲ ರಾಜವಾಡಿ, ವೀಣಾಸುಂದರ್ ಮೊದಲಾದವರ ತಾರಾಬಳಗ ಚಿತ್ರದಲ್ಲಿದೆ.
ಕಿಟ್ಟಿ ಕೌಶಿಕ್ ಛಾಯಾಗ್ರಹಣ, ವೆಂಕಿ ಯುಡಿವಿ ಸಂಕಲನ ಹಾಗೂ ಗುಮ್ಮಿನೇನಿ ವಿಜಯ್ ಅವರ ಸಂಗೀತ ನಿರ್ದೇಶನವು ಈ ಚಿತ್ರಕ್ಕಿದೆ.
















