ಲೋ ನವೀನ.. ಚಿತ್ರವಿಮರ್ಶೆ

ರೇಟಿಂಗ್ : 3.5/5 ನಿರ್ಮಾಣ : ಕೀರ್ತಿಸ್ವಾಮಿ ನಿರ್ದೇಶನ : ಧನುರ್ಧಾರಿ ಪವನ್ ಮದುವೆಯ ಕನಸು ಮಧು ಮಗನ ಸೆಣಸು ಗ್ರಾಮೀಣ ಭಾಗಗಳಲ್ಲಿ ಮದುವೆ ಆಗುವ ಪ್ರಹಸನಗಳೇ ವೈವಿಧ್ಯಮಯ ಮತ್ತು ಯುವ ಜನರ ವಿಚಿತ್ರ..

admin Avatar

by

1 minute

Read Time

Share :

ರೇಟಿಂಗ್ : 3.5/5

ನಿರ್ಮಾಣ : ಕೀರ್ತಿಸ್ವಾಮಿ

ನಿರ್ದೇಶನ : ಧನುರ್ಧಾರಿ ಪವನ್

ಮದುವೆಯ ಕನಸು
ಮಧು ಮಗನ ಸೆಣಸು

ಗ್ರಾಮೀಣ ಭಾಗಗಳಲ್ಲಿ ಮದುವೆ ಆಗುವ ಪ್ರಹಸನಗಳೇ ವೈವಿಧ್ಯಮಯ ಮತ್ತು ಯುವ ಜನರ ವಿಚಿತ್ರ ‌ವರ್ತನೆಗಳ ಸೊಬಗಿನ ತಾಣ..

ಇಲ್ಲೊಬ್ಬ ಮುಗ್ಧ ಹುಡುಗನಿಗೆ ಮದುವೆಯಾಗುವ ಆತುರ.. ಮಾವನ ಮಗಳು ಹೆಚ್ಚಿಸುವಳು ಅವನ ಕಾತುರ.. ಏನು ನಡೆಯುತ್ತಿದೆ ‌ಎಂದು ಅರ್ಥೈಸಿಕೊಳ್ಳದೇ ಸ್ನೇಹ ಬಳಗ ಹೂಡುವ ಆಟಗಳೇ ನಗುವಿನ ರಸದೌತಣ..

ಮನೆಯಿಂದ ಓಡಿಸಿಕೊಂಡು ಹೋಗು ಎಂಬ ಮಾವನ ಮಗಳ ಆಫರ್ ನ ಹಿಂದೆ ಬೇರೆ ಚಮತ್ಕಾರವಿದೆ ಎಂದು ಅರಿಯದ ಮುಗ್ಧ ನವೀನ ಮತ್ತು ಸ್ನೇಹಿತರು ಹೂಡುವ ಆಟವೆಲ್ಲಾ ವ್ಯರ್ಥ..

ಅಷ್ಟೊತ್ತಿಗೆ ಮಧ್ಯಂತರ ಬಂದೇ ಬಿಡುತ್ತದೆ. ಹಾಡು ತಮಾಷೆ ಮಾತುಗಳ ಅಬ್ಬರದಲ್ಲಿ ಕಳೆದು ಹೋಗುವ ಪ್ರೇಕ್ಷಕನಿಗೆ ಸಮಯ ಹೋಗಿದ್ದೇ ತಿಳಿಯುವುದಿಲ್ಲ..

ಅದರಲ್ಲಿಯೂ ಮದುವೆಯಾಗದೆ ಉಳಿದು ಹೋದ ವಯಸ್ಸಾದ ಮದುವೆ ಗಂಡು ನಿಂಗಣ್ಣ ಮತ್ತು ಸ್ನೇಹಿತರು ಹೂಡುವ ಆಟಗಳು ನಗೆಯ ಬುಗ್ಗೆಯನ್ನೇ ಹರಿಸುತ್ತವೆ.

ಉತ್ತರಾರ್ಧದಲ್ಲಿ ಮಹಾನಗರ ಜೀವನ.. ಫುಡ್ ಡೆಲಿವರಿ ಬಾಯ್ ಆಗಿರುವ ನವೀನ ಬೇರೆಯ ಆಟ ಹೂಡುವ ಮುನ್ನ ಅದೇ ಮಾವನ ಮಗಳು ಮತ್ತೆ ಆತನ ಜೀವನದಲ್ಲಿ ವಕ್ಕರಿಸುತ್ತಾಳೆ..

ಮಾವನ ಮಗಳು ಮತ್ತೆ ಸಿಕ್ಕಿದಳೆಂದು ಸಂಭ್ರಮಿಸುವ ನವೀನ ಮತ್ತೆ ಭ್ರಮ ನಿರಸನ ಅನುಭವಿಸುವ ಘಟನೆಗಳು ನಡೆದು ಹೋಗುತ್ತವೆ. ಕೊನೆಗೆ ಒಂದು ಗಂಡಿಗೆ ಒಂದು ಹೆಣ್ಣು ಇದ್ದೇ ಇರುತ್ತಾಳೆ ಎಂಬ ವಾಸ್ತವದ ಜೊತೆಗೆ ಚಿತ್ರ ಮುಗಿಯುತ್ತದೆ..

ಆದರೆ ಪೂರ್ವಾರ್ಧದಲ್ಲಿ ಇದ್ದ ಮುಗ್ಧತೆ, ತಮಾಷೆ ಮತ್ತು ವೇಗವನ್ನು ಉತ್ತರಾರ್ಧದಲ್ಲಿ ಮುಂದುವರೆಸಿದ್ದರೆ ಸಿನಿಮಾದ ಮಜವೇ ಬೇರೆ ಇತ್ತು.

ನವೀನ್ ಸಜ್ಜು ಮುಖ್ಯ ಪಾತ್ರದ ಜೊತೆಗೆ ಸಂಗೀತ ನಿರ್ದೇಶಕರಾಗಿರುವ ಹಿನ್ನೆಲೆಯಲ್ಲಿ ಹಾಡುಗಳು ವಿಜೃಂಭಿಸುತ್ತವೆ. ಜಾನಪದದ ಸೋಬಾನೆ ಸೊಗಡಿನ ಮೂಲ ಕಲಾವಿದರನ್ನೇ ಹುಡುಕಿ ಹಾಡಿಸಿದ ನವೀನ್ ಶ್ರಮ ವ್ಯರ್ಥವಾಗಿಲ್ಲ; ಹಾಡಿನ ದೃಶ್ಯಗಳು ಅಪೂರ್ವ ಎನಿಸುತ್ತವೆ.

ಹಾಡುಗಳು ಮತ್ತು ಚಿತ್ರದ ದೃಶ್ಯಗಳು ಅದ್ಭುತ ಎನಿಸಲು ಡಿಐ ಕೂಡ ನೆಪವಾಗಿದೆ. ಫಿನಿಕ್ಸ್ ಮೀಡಿಯಾದ ಜೇಕಬ್ ಮ್ಯಾಥ್ಯು ಅವರ ಕೈ ಚಳಕದಿಂದ ಮನಸೂರೆಗೊಳ್ಳುವಂತೆ ಇರುವ ದೃಶ್ಯಗಳು ಪ್ರೇಕ್ಷಕನನ್ನು ಮೈ ಮರೆಯುವಂತೆ ಮಾಡುವುದೇ ವಿಶೇಷ..

ವರ್ಷ ಗಿರಿಧರ್, ರೇಷ್ಮಾ ಗೌಡ, ಅಪೂರ್ವ, ಪ್ರಕಾಶ್ ತೂಮಿನಾಡು ಮೊದಲಾದ ಪಾತ್ರ ವರ್ಗ ಇಲ್ಲಿ ಗಮನಾರ್ಹ.

ರಿಷಿಕೇಶ್,ಸತೀಶ್, ಜೀವನ್ ಛಾಯಾಗ್ರಹಣ ಗ್ರಾಮೀಣ ಸೌಂದರ್ಯ ಸೊಬಗನ್ನು ಅತ್ಯುತ್ತಮ ರೀತಿಯಲ್ಲಿ ಸೆರೆ ಹಿಡಿದಿದೆ.

Share :

About the Author

About our Editor

Snehapriya Nagaraj is one of the renowned film journalist with vast experience of more than 25 years in the field of film industry. Apart from being columist for many news publications he has also penned many novels. Nagaraj is honoured with many awards for his immense contribution in film media.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports