ಲವ್ ಮಾಕ್ಟೇಲ್ 3 ಚಿತ್ರವಿಮರ್ಶೆ

ರೇಟಿಂಗ್ : 3.5/5 ನಿರ್ಮಾಣ : ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ನಿರ್ದೇಶನ : ಡಾರ್ಲಿಂಗ್ ಕೃಷ್ಣ ಅಪ್ಪ-ಮಗಳ ಅಕ್ಕರೆಯ ಸಕ್ಕರೆಗೆ ಭಾವನೆಗಳ ಮಾಧುರ್ಯ ಬೆಸುಗೆ.. ಒಂದೇ ಕಥೆಯ ಮುಂದುವರಿಕೆಯ ಭಾಗವನ್ನು (ಸೀಕ್ವೆಲ್) ಮತ್ತೆ ಮತ್ತೆ ಅಭಿವ್ಯಕ್ತಿಸುವುದು ಸುಲಭದ ವಿಷಯವಲ್ಲ; ಆದರೆ ಒಂದು ಲಯ ಕಂಡುಕೊಂಡ ಮೇಲೆ ಅದು ಕಷ್ಟವೂ ಅಲ್ಲ.. ಎಂದಿನಂತೆ ಹಿಂದಿನ ಭಾಗಗಳ ಮೆಲುಕು ಝಲಕ್ ಗಳ ನಡುವೆ ಆರಂವಾಗುವ ಕಥೆಯಲ್ಲಿ ತುಂಟುತನ ಮಿಶ್ರಿತ ವಾಗ್ಝರಿ ಕಾಣಿಸುತ್ತದೆ. ಇದು ಪ್ರೇಕ್ಷಕನನ್ನು ಕೊಂಚ ಕೊಂಚವೇ ಸೆಳೆಯುತ್ತ…

Share :

ರೇಟಿಂಗ್ : 3.5/5

ನಿರ್ಮಾಣ : ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್

ನಿರ್ದೇಶನ : ಡಾರ್ಲಿಂಗ್ ಕೃಷ್ಣ

ಅಪ್ಪ-ಮಗಳ ಅಕ್ಕರೆಯ ಸಕ್ಕರೆಗೆ
ಭಾವನೆಗಳ ಮಾಧುರ್ಯ ಬೆಸುಗೆ..

ಒಂದೇ ಕಥೆಯ ಮುಂದುವರಿಕೆಯ ಭಾಗವನ್ನು (ಸೀಕ್ವೆಲ್) ಮತ್ತೆ ಮತ್ತೆ ಅಭಿವ್ಯಕ್ತಿಸುವುದು ಸುಲಭದ ವಿಷಯವಲ್ಲ; ಆದರೆ ಒಂದು ಲಯ ಕಂಡುಕೊಂಡ ಮೇಲೆ ಅದು ಕಷ್ಟವೂ ಅಲ್ಲ..

ಎಂದಿನಂತೆ ಹಿಂದಿನ ಭಾಗಗಳ ಮೆಲುಕು ಝಲಕ್ ಗಳ ನಡುವೆ ಆರಂವಾಗುವ ಕಥೆಯಲ್ಲಿ ತುಂಟುತನ ಮಿಶ್ರಿತ ವಾಗ್ಝರಿ ಕಾಣಿಸುತ್ತದೆ. ಇದು ಪ್ರೇಕ್ಷಕನನ್ನು ಕೊಂಚ ಕೊಂಚವೇ ಸೆಳೆಯುತ್ತ ಕೊನೆಗೆ ಭಾವನಾತ್ಮಕ ಅಂಚಿಗೆ ತಳ್ಳಿ ಬಿಡುತ್ತದೆ..

ಅಷ್ಟಕ್ಕೂ ಇದು ಅಪ್ಪ ಮಗಳ ಭಾವನಾತ್ಮಕ ಸಂಬಂಧದ ಕಥೆಯೇ..! ಸ್ನೇಹಿತ (ವಿಜು ಮಾಮ) , ಮನೆಯ ಕೆಲಸದ ಮನೆ ಒಡೆಯ( ಜಗು ಮಮ್ಮಿ) ಮತ್ತು ಶಾಲೆಯ ಟೀಚರ್, ಪ್ರಿನ್ಸಿಪಾಲ್ ಇವುಗಳ ತಮಾಷೆಯ ನಡುವೆ ಮೊದಲರ್ಧ ಮುಗಿದು ಹೋಗುತ್ತದೆ..

ಉತ್ತರಾರ್ಧದಲ್ಲಿ ಮಗುವಿನ ದತ್ತು ವಿಷಯ ನ್ಯಾಯಾಲಯದವರೆಗೂ ಬಂದು ಕೋರ್ಟ್ ಡ್ರಾಮ ಸಂಬಂಧಗಳ ನೆಲೆಯನ್ನು ಪ್ರಶ್ನಿಸುತ್ತಾ ಹೋಗುತ್ತದೆ. ಪ್ರಸಕ್ತ ಸನ್ನಿವೇಶದಲ್ಲಿ ಸಾಮಾಜಿಕ ನೆಲೆಯಲ್ಲಿ ಇರುವ ಸಮಕಾಲೀನ ಒತ್ತಡದ ಅಭಿವ್ಯಕ್ತಿ ಎದ್ದು ಕಾಣುತ್ತದೆ..

ಮದುವೆ ಮುಂಚೆ ಬರುವ ಲಿವ್ ಇನ್ ಸಂಬಂಧದಿಂದ ಮಗು ಜನಿಸುವುದರಿಂದ ಹಿಡಿದು ಕೆಲಸದ (ನರ್ಸ್) ನಿರ್ಲಕ್ಷ್ಯಕ್ಕೆ ಜೀವನವನ್ನೇ ಬಲಿ ಪಡೆಯುವ ವಿಷಯ. ನಂತರ ತಾಯಿ ಮಗುವಿಗಾಗಿ ಹಂಬಲಿಸುವಿಕೆ ಇವುಗಳ ನಡುವೆ. ಸಾಕು ಅಪ್ಪನ ನಿಷ್ಕಲ್ಮಶ ಪ್ರೀತಿ ಮತ್ತು‌ ಅದಮ್ಯ ನಂಬಿಕೆಯ ಸ್ಪಷ್ಟ ನಿಲುವುಗಳು ಪ್ರೇಕ್ಷಕನ ಹೃದಯವನ್ನು ಭಾರವಾಗಿಸುತ್ತವೆ.

ಮಗುವಿನ ಮುಗ್ಧ ನಿಲುವು, ಅಪ್ಪನ ಅಸಹಾಯಕತೆ, ಶಾಲೆಯ ಟೀಚರ್ ಮತ್ತು ಪ್ರಿನ್ಸಿಪಾಲ್ ಖಡಕ್ ನಿಲುವಿನ ಹಾಸ್ಯದ ಹೊನಲು ಪ್ರೇಕ್ಷಕ ಒಂದೆಳೆಯೂ ಕದಲದಂತೆ ಮಾಡುತ್ತದೆ.

ಕೋರ್ಟ್ ಸನ್ನಿವೇಶಗಳು ಈಗ್ಗೆ ಹತ್ತು ವರ್ಷಗಳ ಹಿಂದೆ ಬಂದಿದ್ದ ವಿಕ್ರಂ ಮುಖ್ಯ ಭೂಮಿಕೆಯಲ್ಲಿದ್ದ ತಮಿಳು ಚಿತ್ರ ‘ದೈವ ತಿರುಮಗಳ್’ ನೆನಪಿಗೆ ತರುತ್ತವೆ. ಆದರೆ ಇಲ್ಲಿ ಅಪ್ಪನ ಒಂಟಿತನ ಮತ್ತು ಗಟ್ಟಿತನದ ಭರವಸೆ ನೆಲೆಯಲ್ಲಿ ಚಿತ್ರವು ಸಾಗುತ್ತದೆ.

ಡಾರ್ಲಿಂಗ್ ಕೃಷ್ಣ ಎಂದಿನ ಸಹಜ ನಟನೆಯಲ್ಲೇ ಗಮನ ಸೆಳೆದರೆ, ಮಿಲನಾ ನಾಗರಾಜ್ ವಿದೇಶದಲ್ಲಿ ಸ್ಟೈಲೀಶ್ ರೂಪದಲ್ಲಿ ಬಂದು ಹಾಡಿನಲ್ಲಿ ಗಮನ ಸೆಳೆಯುತ್ತಾರೆ.

ವಿಜಯ ಪ್ರಕಾಶ್ ಹಾಡಿರುವ ಮುದ್ದು ಮಗಳೇ.. ಹಾಡು ಗಮನ ಸೆಳೆಯುತ್ತದೆ.. ಬಾಲನಟಿ ಸಂವೃತ ನಟನೆಯಲ್ಲಿ ಸೈ ಎನಿಸಿಕೊಳ್ಳುತ್ತಾಳೆ. ಕೋರ್ಟ್ ಸನ್ನಿವೇಶಗಳ ವೇಳೆ ನ್ಯಾಯಾಧೀಶರಾಗಿ ನಟಿಸಿರುವ (ನಿರ್ದೇಶಕ) ಬಿ.ಎಂ.ಗಿರಿರಾಜ್ ನಟನೆ ಗಮನ ಸೆಳೆಯುತ್ತದೆ. ದಿಲೀಪ್ ಹಾಗೂ ಶ್ವೇತಾ ಪ್ರಸಾದ್ ನಟನೆಯೂ ಗಮನಾರ್ಹ.

ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ನಯೇರಾ, ಜಗದೀಶ್, ಅಭಿಲಾಶ್, ದಳಪತಿ ಮೊದಲಾದ ತಾರಾಗಣ ಮನರಂಜನಾತ್ಮ ನೆಲೆಯಲ್ಲಿ ಗಮನ ಸೆಳೆಯುತ್ತದೆ.

ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ, ನಕುಲ್ ಅಭಯಂಕರ್ ಸಂಗೀತ ಚಿತ್ರದ ಭಾವನಾತ್ಮಕ ಅಂಶಗಳಿಗೆ ಪೂರಕವಾಗಿದೆ.

Share :

About the Author

Leave a Reply

Your email address will not be published. Required fields are marked *

About our Editor

Snehapriya Nagaraj is one of the renowned film journalist with vast experience of more than 25 years in the field of film industry. Apart from being columist for many news publications he has also penned many novels. Nagaraj is honoured with many awards for his immense contribution in film media.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports