
* ಸೆಪ್ಟೆಂಬರ್ 25ಕ್ಕೆ ಬಿಡುಗಡೆ *
* ಸಾಯಿ ಪ್ರಕಾಶ್ 106 ನೇ ಚಿತ್ರ *
* ವಿನಯ್ ಚಂದ್ರ ಸಂಗೀತ *
ಸಾಮಾನ್ಯ ಮನುಷ್ಯನೊಬ್ಬ ರಾಜ್ಯದ ಮುಖ್ಯಮಂತ್ರಿಯಾದರೆ ಅದರ ಪರಿಣಾಮಗಳೇನು ಎಂಬುದರ ಸುತ್ತ ಕಥಾ ಹಂದರವಿರುವ ಕಾಮನ್ ಮ್ಯಾನ್ ಇದೇ ವಾರ ಅಂದರೆ ಸೆಪ್ಟೆಂಬರ್ 25 ರಂದು ಬಿಡುಗಡೆ ಕಾಣುತ್ತಿದೆ.
ಸಾಮಾಜಿಕ ಕಾರ್ಯಕರ್ತರಾಗಿರುವ ಎನ್.ನರಸಿಂಹಸ್ವಾಮಿ ಕಥೆ ಬರೆದು ನಿರ್ಮಾಣ ಮಾಡಿರುವ ಈ ಚಿತ್ರವನ್ನು ಹಿರಿಯ ನಿರ್ದೇಶಕ ಓಂ.ಸಾಯಿ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ ಮತ್ತು ಅವರ 106 ಚಿತ್ರ ಇದಾಗಿದೆ.

ಕೆರೆ ಬೇಟೆ ಖ್ಯಾತಿಯ ಗೌರಿ ಶಂಕರ್ ಮುಖ್ಯ ಪಾತ್ರದಲ್ಲಿರುವ ಚಿತ್ರದಲ್ಲಿ ಹಿರಿಯ ನಟ ಅಶೋಕ್, ಗಣೇಶ್ ಕೇಸರ್ ಕರ್, ಎಸ್ಕಾರ್ಟ್ ಶ್ರೀನಿವಾಸ್, ನಾಗೇಂದ್ರ ಅರಸ್ ಮೊದಲಾದವರ ತಾರಾಗಣವಿದೆ.
ಕಾಮನ್ ಮ್ಯಾನ್ ಆಶಯಗಳು ಅತ್ಯುತ್ತಮವಾಗಿವೆ. ಚಿತ್ರದಲ್ಲಿ ಅನೇಕ ತಾಂತ್ರಿಕ ಅಂಶಗಳು ಕಲಿಕೆಗೆ ಸಹಕಾರಿಯಾದವು ಎಂದರು ನಟ ಗೌರಿ ಶಂಕರ್.
ವಿನಯ್ ಚಂದ್ರ ಚಿತ್ರಕ್ಕೆ ಸಂಗೀತ ನೀಡಿದ್ದು, ಗೌರಿ ಶಂಕರ್ ಎದುರು ಸೋನಾ ಲದ್ವಾ ನಟಿಸಿದ್ದಾರೆ. ಜೆ.ಜಿ.ಕೃಷ್ಣ ಹಾಗೂ ಅವರ ಪುತ್ರ ದೀಪಕ್ ಕೃಷ್ಣ ಇದರ ಛಾಯಾಗ್ರಾಹಕರು.

ಈಚೆಗೆ ನಡೆದ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ವೈಶಿಷ್ಟ್ಯ ಗಳ ಬಗ್ಗೆ ಚಿತ್ರತಂಡ ಮಾಹಿತಿ ನೀಡಿತು. ಹಿರಿಯ ನಿರ್ದೇಶಕ ಬಿ.ರಾಮಮೂರ್ತಿ ಹಾಗೂ ಸಂಗೀತ ನಿರ್ದೇಶಕ ವಿ.ಮನೋಹರ್ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು.

















