ಸೆವೆನ್ ರಾಜ್ ಪ್ರೇಕ್ಷಕರ ಪಾಲಿನ ಬಂಗಾರದ ಮನುಷ್ಯ

ಯಾರಿಗಾದರೂ ಅಚ್ಚರಿಯಾಗಬಹುದು ಕನ್ನಡ ಚಿತ್ರರಂಗ ಸ್ಯಾಂಡಲ್ ವುಡ್ ನಲ್ಲಿ ಒಬ್ಬ ನಿರ್ಮಾಪಕರು ತಮ್ಮ ಚಿತ್ರ ನೋಡಿದ ಪ್ರೇಕ್ಷರಿಗೆ ಅದೃಷ್ಟದ ಆಧಾರದಲ್ಲಿ ಚಿನ್ನದ ನಾಣ್ಯವನ್ನು ನೀಡುತ್ತಿದ್ದಾರೆ. ಹೌದು ಹಾಗೆ ಬಂಗಾರದ ನಾಣ್ಯ ನೀಡುತ್ತಾ ಪ್ರೇಕ್ಷಕರ ಪಾಲಿನ ಬಂಗಾರದ ಮನುಷ್ಯನಾಗಿ ಕಂಗೊಳಿಸುತ್ತಿರುವವರ ಹೆಸರು ಸೆವೆನ್ ರಾಜ್. ಏಳರ ಅಂಕಿ ಮತ್ತು ತಮ್ಮ ರೆಡ್ ಅಂಡ್ ವೈಟ್ ವಸ್ತ್ರ ವಿನ್ಯಾಸವನ್ನು ಜಗಜಾಹಿರುಗೊಳಿಸುತ್ತಾ ಪ್ರಸಿದ್ಧಿಯ ಮುನ್ನೆಲೆಗೆ ಬಂದಿರುವ ಸೆವೆನ್ ರಾಜ್ ಅಪರೂಪದ ನಿರ್ಮಾಪಕ ಎಂಬುದಕ್ಕೆ ನಿದರ್ಶಗಳು ಬೇಕಾದಷ್ಟಿವೆ. ನಿರ್ಮಾಪಕ ಅನ್ನದಾತ..! ಇದು ಕನ್ನಡದ…

Share :

ಯಾರಿಗಾದರೂ ಅಚ್ಚರಿಯಾಗಬಹುದು ಕನ್ನಡ ಚಿತ್ರರಂಗ ಸ್ಯಾಂಡಲ್ ವುಡ್ ನಲ್ಲಿ ಒಬ್ಬ ನಿರ್ಮಾಪಕರು ತಮ್ಮ ಚಿತ್ರ ನೋಡಿದ ಪ್ರೇಕ್ಷರಿಗೆ ಅದೃಷ್ಟದ ಆಧಾರದಲ್ಲಿ ಚಿನ್ನದ ನಾಣ್ಯವನ್ನು ನೀಡುತ್ತಿದ್ದಾರೆ. ಹೌದು ಹಾಗೆ ಬಂಗಾರದ ನಾಣ್ಯ ನೀಡುತ್ತಾ ಪ್ರೇಕ್ಷಕರ ಪಾಲಿನ ಬಂಗಾರದ ಮನುಷ್ಯನಾಗಿ ಕಂಗೊಳಿಸುತ್ತಿರುವವರ ಹೆಸರು ಸೆವೆನ್ ರಾಜ್. ಏಳರ ಅಂಕಿ ಮತ್ತು ತಮ್ಮ ರೆಡ್ ಅಂಡ್ ವೈಟ್ ವಸ್ತ್ರ ವಿನ್ಯಾಸವನ್ನು ಜಗಜಾಹಿರುಗೊಳಿಸುತ್ತಾ ಪ್ರಸಿದ್ಧಿಯ ಮುನ್ನೆಲೆಗೆ ಬಂದಿರುವ ಸೆವೆನ್ ರಾಜ್ ಅಪರೂಪದ ನಿರ್ಮಾಪಕ ಎಂಬುದಕ್ಕೆ ನಿದರ್ಶಗಳು ಬೇಕಾದಷ್ಟಿವೆ.

ನಿರ್ಮಾಪಕ ಅನ್ನದಾತ..! ಇದು ಕನ್ನಡದ ವರನಟ, ಅಭಿಮಾನಿ ದೇವರುಗಳ ದೇವರು ಡಾ.ರಾಜ್ ಕುಮಾರ್ ಅವರ ಅಮೃತ ವಾಕ್ಯ. ಅದನ್ನು ಅಕ್ಷರಶಃ ಸಾಧ್ಯಗೊಳಿಸುತ್ತಾ ನಡೆದಿರುವ ಸೆವೆನ್ ರಾಜ್ ಒಬ್ಬ ನಿರ್ಮಾಪಕ ಹೀಗೂ ಇರಲು ಸಾಧ್ಯ ಎಂಬುದಕ್ಕೆ ಉತ್ತಮ ಉದಾಹರಣೆ.

ಏಕೆಂದರೆ ಚಿತ್ರಮಂದಿರಗಳಲ್ಲಿ ಕೇವಲ ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ. ಕೊರೊನಾ ಮಹಾಮಾರಿಯ ಹೊಡೆತದಿಂದ ದಿಕ್ಕು ತಪ್ಪಿರುವ ಮನರಂಜನಾ ಕ್ಷೇತ್ರ. ಮುಖ್ಯವಾಗಿ ಪ್ರೇಕ್ಷಕ ಪ್ರಭುವಿನ
ಅಸಹಾಕಾರ.. ಇದೆಲ್ಲದರ ನಡುವೆ ಬಿಡುಗಡೆ ಕಂಡ ‘ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಚಿತ್ರ ಗಮನ ಸೆಳೆದಿದೆ; ಮತ್ತದರ ನಿರ್ಮಾಪಕ ಸೆವೆನ್ ರಾಜ್ ಕೂಡ ಪ್ರೇಕ್ಷಕರಿಗೆ ಗೋಲ್ಡ್ ಕಾಯಿನ್ ನೀಡುವ ಅಪರೂಪದ ಹಾಗೂ ಜನಮನ ಸೆಳೆಯುವ ಬಹುಮಾನ ನೀಡುತ್ತಿದ್ದಾರೆ.

ಆಸ್ಕರ್ ಕೃಷ್ಣ ನಿರ್ದೇಶನದ ‘ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಚಿತ್ರವು ಹಾಸ್ಯ ಪ್ರಧಾನ ಚಿತ್ರವೆಂಬ ಕಾರಣಕ್ಕೆ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಯುವನಟ ಲೋಕೇಂದ್ರ ಸೂರ್ಯ ಅವರ ವಿಶಿಷ್ಟ ಮ್ಯಾನರಿಜಂನ ನಟನೆ ಚಿತ್ರದ ಮುಖ್ಯಾಂಶ. ಕ್ಲೈಮ್ಯಾಕ್ಸ್ ನಲ್ಲಿ ಎಂಥವರ ಕಣ್ಣು ಒದ್ದೆಯಾಗುವ ಮಟ್ಟಿನ ನಟನೆಯಲ್ಲಿ ಅವರು ಗಮನ ಸೆಳೆಯುತ್ತಾರೆ.

ಇನ್ನು ನಿರ್ಮಾಪಕ ಸೆವೆನ್ ರಾಜ್ ಅವರದು ವಿಲನ್ ಆಗಿ ಗಮನಾರ್ಹ ಪಾತ್ರ. ಚಿತ್ರ ಎಷ್ಟೇ ಗಮನ ಸೆಳೆಯುವಂತಿದ್ದರೂ ಪ್ರೇಕ್ಷಕ ಈಗ ಚಿತ್ರ ಮಂದಿರಕ್ಕೆ ಎಡತಾಕುವುದಿಲ್ಲ..
ಅದಕ್ಕೆ ನೂರೆಂಟು ಕಾರಣಗಳು. ಇಂತಹ ಬರಗಾರದಲ್ಲಿ ಏನು ಮಾಡಬೇಕು ಎಂಬುದಕ್ಕೆ ಸೆವೆನ್ ರಾಜ್ ಕಂಡುಕೊಂಡ ಮಾರ್ಗ ಪ್ರೇಕ್ಷಕರಿಗೆ ಗೋಲ್ಡ್ ಕಾಯಿನ್ ನೀಡುವುದು. ಇದು ಅಷ್ಟು ಸುಲಭದ ಕೆಲಸವಲ್ಲ; ಆದರೂ ಮನಸ್ಸು ಮಾಡಿದ್ದಾರೆ.

ಈಗ ರಾಜಧಾನಿ ಬೆಂಗಳೂರಿನ ಮುಖ್ಯ ಚಿತ್ರಮಂದಿರದ ಕಲ್ಪನೆ ಮಾಗಡಿ ರಸ್ತೆಯಲ್ಲಿರುವ ವೀರೇಶ್ ಚಿತ್ರಮಂದಿರದತ್ತ ಬಂದು ನಿಂತಿದೆ. ಈ ಚಿತ್ರ ಮಂದಿರಕ್ಕೆ ಬರುವ ಪ್ರೇಕ್ಷಕರ ಪೈಕಿ ಅದೃಷ್ಟಶಾಲಿ ಒಬ್ಬರಿಗೆ ಅರ್ಧ ಬಂಗಾರದ ನಾಣ್ಯ ದೊರೆಯುತ್ತದೆ. ಅಲ್ಲಿ ‘ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಚಿತ್ರವು ಬೆಳಗಿನ ಎರಡು ಪ್ರದರ್ಶನ ಕಾಣುತ್ತದೆ. ಆ ಎರಡು ಪ್ರದರ್ಶನದಲ್ಲಿಯೂ ತಲಾ ಅರ್ಧ ಗೋಲ್ಡ್ ಕಾಯಿನ್ ಟಿಕೆಟ್ ನ ಲಕ್ಕಿ ಡೀಪ್ ಮೂಲಕ ಪ್ರೇಕ್ಷಕನಿಗೆ ಸಿಗುತ್ತದೆ.

ಕಳೆದ ಮಂಗಳವಾರ ನಿರ್ಮಾಪಕ ಸೆವೆನ್ ರಾಜ್ ಸೇರಿದಂತೆ ಇಡೀ ಚಿತ್ರತಂಡ ಚಿತ್ರಮಂದಿರದಲ್ಲಿ ಹಾಜರಿದ್ದು ವಿಜೇತರಿಗೆ ಗೋಲ್ಡ್ ಕಾಯಿನ್ ನೀಡಿತು. ಎರಡು ಪ್ರದರ್ಶನ ಒಂದು ಗೋಲ್ಡ್ ಕಾಯಿನ್. ಪ್ರತಿ ಪ್ರದರ್ಶನದಲ್ಲಿ ಅದೃಷ್ಟಶಾಲಿಗೆ ಅರ್ಧ ಬಂಗಾರದ ನಾಣ್ಯ ಸಿಗುತ್ತದೆ.

ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಗೋಲ್ಡ್ ಕಾಯಿನ್ ವಿಷಯ ಪ್ರಕಟಿಸಿ ಮಂಗಳವಾರ ಅದನ್ನು ಜಾರಿಗೊಳಿಸಿದ ಸೆವೆನ್ ರಾಜ್ ವೃತ್ತಿ ಬದ್ಧತೆ ಇರುವ ನಿರ್ಮಾಪಕ ಎಂಬುದನ್ನು ಸಾಬೀತು ಮಾಡಿಕೊಂಡರು. ಆ ಮೂಲಕ ಪ್ರೇಕ್ಷಕರ ಪಾಲಿಗೀಗ ಬಂಗಾರದ ಮನುಷ್ಯ ಆದರು.

ಸ್ಯಾಂಡಲ್ ವುಡ್ ನ ದೊಡ್ಡ ದೊಡ್ಡ ಚಿತ್ರಗಳು ಬಿಡುಗಡೆಯ ಸಾಲಿನಲ್ಲಿವೆ. ಸರ್ಕಾರ ಇನ್ನೇನು ಶೇಕಡಾ ನೂರರಷ್ಟು ಚಿತ್ರಮಂದಿರ ಭರ್ತಿಗೆ ಅವಕಾಶವನ್ನೂ ನೀಡಬಹುದು. ಆದರೆ ಒಂದು ಸಾಧಾರಣ ಚಿತ್ರವಾಗಿ ‘ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಚಿತ್ರದ ತಂಡ ಮಾಡುತ್ತಿರುವ ಪ್ರಯತ್ನ ಅನನ್ಯ.

Share :

About the Author

Leave a Reply

Your email address will not be published. Required fields are marked *

About our Editor

Snehapriya Nagaraj is one of the renowned film journalist with vast experience of more than 25 years in the field of film industry. Apart from being columist for many news publications he has also penned many novels. Nagaraj is honoured with many awards for his immense contribution in film media.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports