ಬನಾರಸ್ 2500 ಸ್ಕ್ರೀನ್ ಗಳಲ್ಲಿ ಭಾರತದಾದ್ಯಂತ ಬಿಡುಗಡೆ

ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಅವರ ಪುತ್ರ ಝೈಹಿದ್ ಖಾನ್ ಮುಖ್ಯ ಪಾತ್ರದಲ್ಲಿರುವ ಹಾಗೂ ಜಯತೀರ್ಥ ನಿರ್ದೇಶನದ ‘ಬನಾರಸ್’ ಭಾರತದಾದ್ಯಂತ 2500 ಪರದೆಗಳಲ್ಲಿ ಬಿಡುಗಡೆ ಕಂಡಿದೆ. ನವೆಂಬರ್ 2ರ ಬುಧವಾರ ಚಿತ್ರತಂಡ ಮಾಧ್ಯಮಗಳಿಗೆ ಈ ಮಾಹಿತಿ ನೀಡಿದೆ. ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಅದರ ಬಿಡುಗಡೆಯ ವಿಷಯವಾಗಿಯೇ ಚಿತ್ರತಂಡ ಮಾತನಾಡಿತು. ನಿರ್ದೇಶಕ ಜಯತೀರ್ಥ, ನಿರ್ಮಾಪಕ ತಿಲಕ್ ಬಲ್ಲಾಳ್, ವಿತರಣೆ ಪಡೆದಿರುವ ಕೆವಿಎನ್ ಪ್ರೊಡಕ್ಷನ್ ನ ಸುಪ್ರೀತ್ ಹಾಗೂ ನಟ ಸುಜಯ್ ಶಾಸ್ತ್ರಿ ಜೊತೆ ಝೈಹಿದ್ ಖಾನ್ ಮಾಧ್ಯಮಗಳಿಗೆ ವಿವರಣೆ…

Share :

ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಅವರ ಪುತ್ರ ಝೈಹಿದ್ ಖಾನ್ ಮುಖ್ಯ ಪಾತ್ರದಲ್ಲಿರುವ ಹಾಗೂ ಜಯತೀರ್ಥ ನಿರ್ದೇಶನದ ‘ಬನಾರಸ್’ ಭಾರತದಾದ್ಯಂತ 2500 ಪರದೆಗಳಲ್ಲಿ ಬಿಡುಗಡೆ ಕಂಡಿದೆ.

ನವೆಂಬರ್ 2ರ ಬುಧವಾರ ಚಿತ್ರತಂಡ ಮಾಧ್ಯಮಗಳಿಗೆ ಈ ಮಾಹಿತಿ ನೀಡಿದೆ. ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಅದರ ಬಿಡುಗಡೆಯ ವಿಷಯವಾಗಿಯೇ ಚಿತ್ರತಂಡ ಮಾತನಾಡಿತು.

ನಿರ್ದೇಶಕ ಜಯತೀರ್ಥ, ನಿರ್ಮಾಪಕ ತಿಲಕ್ ಬಲ್ಲಾಳ್, ವಿತರಣೆ ಪಡೆದಿರುವ ಕೆವಿಎನ್ ಪ್ರೊಡಕ್ಷನ್ ನ ಸುಪ್ರೀತ್ ಹಾಗೂ ನಟ ಸುಜಯ್ ಶಾಸ್ತ್ರಿ ಜೊತೆ ಝೈಹಿದ್ ಖಾನ್ ಮಾಧ್ಯಮಗಳಿಗೆ ವಿವರಣೆ ನೀಡಿದರು.

ಚಿತ್ರವು ರಾಜ್ಯದ 125 ಸಿಂಗಲ್ ಚಿತ್ರಮಂದಿರಗಳಲ್ಲಿ ಮತ್ತು‌50ರಿಂದ 60 ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆ ಕಾಣುತ್ತಿದೆ ಎಂಬ ವಿವರ ಬಂತು ವಿತರಕ ಸುಪ್ರೀತ್ ಅವರಿಂದ.

‘ಬನಾರಸ್’ ಪ್ಯಾನ್ ಇಂಡಿಯಾ ಮೂವಿ ಆಗಿರುವುದರಿಂದ ಇಡೀ ದೇಶದ ಎಲ್ಲಾ ಮಾಧ್ಯಮಗಳ ಜೊತೆ ಮಾತುಕತೆ ನಡೆಸಬೇಕಾಯಿತು. ಹಾಗಾಗಿ ಇಲ್ಲಿಯವರೆಗೂ ಒಂದು ಸಾವಿರಕ್ಕೂ ಅಧಿಕ ಸಂದರ್ಶನವನ್ನು ಮಾಧ್ಯಮಗಳಿಗೆ ನೀಡಿರುವುದಾಗಿ ಹೇಳಿಕೊಂಡರು ಝೈಹಿದ್ ಖಾನ್.

ಚಿತ್ರವನ್ನು ಇಲ್ಲಿಯವರೆಗೆ ತಂದಿದ್ದೇವೆ ಇನ್ನು ಮುಂದೆ ಇದು ನಿಮ್ಮ ಚಿತ್ರ ಎಲ್ಲಿಗಾದರೂ ಕಳಿಸಿ ಎಂದರು ನಿರ್ದೇಶಕ ಜಯತೀರ್ಥ.

ಒಂದು ಉತ್ತಮ ಚಿತ್ರ ಮಾಡಿದ ಸಂತೃಪ್ತಿ ಇದೆ ಎಂದರು ನಿರ್ಮಾಪಕ ತಿಲಕ್ ಬಲ್ಲಾಳ್. ಸುಜಯ್ ಶಾಸ್ತ್ರಿ ಬನಾರಸ್ ನ ವಿಷಯಗಳನ್ನು ಹೇಳಿ ಶುಭ ಹಾರೈಸಿದರು.

Share :

About the Author

Leave a Reply

Your email address will not be published. Required fields are marked *

About our Editor

Snehapriya Nagaraj is one of the renowned film journalist with vast experience of more than 25 years in the field of film industry. Apart from being columist for many news publications he has also penned many novels. Nagaraj is honoured with many awards for his immense contribution in film media.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports