ಥ್ರಿಲ್ಲರ್ ಮಂಜು ಡೆಡ್ಲಿ ಕಿಲ್ಲರ್ ಗೆ ನವರಸ ನಾಯಕ ಜಗ್ಗೇಶ್ ಬೆಂಬಲ

ಚಲನಚಿತ್ರಗಳಲ್ಲಿ ಬರುವ ಸಾಹಸ ದೃಶ್ಯಗಳು ಪ್ರೇಕ್ಷಕರ ಮೈ ನವಿರೇಳಿಸುತ್ತವೆ.. ಆ ಸಾಹಸ ದೃಶ್ಯಗಳನ್ನು ಯಾರು ಸಂಯೋಜಿಸುತ್ತಾರೆ.. ಹೇಗೆ ಸಂಯೋಜಿಸುವರು ಎಂಬ ಪ್ರಶ್ನೆ ಬಂದಾಗ ಒಂದು ಹೆಸರು ಮುಂಚೂಣಿಯಲ್ಲಿ ಬರುತ್ತದೆ.. ಅವರೇ ಥ್ರಿಲ್ಲರ್ ಮಂಜು..! ಕೇವಲ ಫೈಟರ್ ಮಾತ್ರವಲ್ಲ; ಸಾಹಸ ಸಂಯೋಜನೆಯಿಂದ ಹಿಡಿದು ಮುಖ್ಯ ಪಾತ್ರದಲ್ಲಿ ನಟನೆ ಮಾಡುವುದು ಜೊತೆಗೆ ನಿರ್ದೇಶನ ಮಾಡುವುದು ಸೇರಿದಂತೆ ಚಿತ್ರರಂಗದ ಎಲ್ಲಾ ವಿಭಾಗಗಳಲ್ಲಿ ದುಡಿಯುವ ಥ್ರಿಲ್ಲರ್ ಮಂಜು ಈಗ ಹಾಡು ಬರೆಯುವ ಮೂಲಕ ಗೀತ ಸಾಹಿತ್ಯ ವಿಭಾಗಕ್ಕೂ ಧುಮುಕಿದ್ದಾರೆ.. ಅದೇ ಡೆಡ್ಲಿ ಕಿಲ್ಲರ್..!…

Share :

ಚಲನಚಿತ್ರಗಳಲ್ಲಿ ಬರುವ ಸಾಹಸ ದೃಶ್ಯಗಳು ಪ್ರೇಕ್ಷಕರ ಮೈ ನವಿರೇಳಿಸುತ್ತವೆ.. ಆ ಸಾಹಸ ದೃಶ್ಯಗಳನ್ನು ಯಾರು ಸಂಯೋಜಿಸುತ್ತಾರೆ.. ಹೇಗೆ ಸಂಯೋಜಿಸುವರು ಎಂಬ ಪ್ರಶ್ನೆ ಬಂದಾಗ ಒಂದು ಹೆಸರು ಮುಂಚೂಣಿಯಲ್ಲಿ ಬರುತ್ತದೆ.. ಅವರೇ ಥ್ರಿಲ್ಲರ್ ಮಂಜು..! ಕೇವಲ ಫೈಟರ್ ಮಾತ್ರವಲ್ಲ; ಸಾಹಸ ಸಂಯೋಜನೆಯಿಂದ ಹಿಡಿದು ಮುಖ್ಯ ಪಾತ್ರದಲ್ಲಿ ನಟನೆ ಮಾಡುವುದು ಜೊತೆಗೆ ನಿರ್ದೇಶನ ಮಾಡುವುದು ಸೇರಿದಂತೆ ಚಿತ್ರರಂಗದ ಎಲ್ಲಾ ವಿಭಾಗಗಳಲ್ಲಿ ದುಡಿಯುವ ಥ್ರಿಲ್ಲರ್ ಮಂಜು ಈಗ ಹಾಡು ಬರೆಯುವ ಮೂಲಕ ಗೀತ ಸಾಹಿತ್ಯ ವಿಭಾಗಕ್ಕೂ ಧುಮುಕಿದ್ದಾರೆ..

ಅದೇ ಡೆಡ್ಲಿ ಕಿಲ್ಲರ್..!

ಥ್ರಿಲ್ಲರ್ ಮಂಜು ಬಹಳ ಸಮಯದ ಬಳಿಕ ನಟಿಸಿ, ನಿರ್ದೇಶನ ಮಾಡುತ್ತಿರುವ ಚಿತ್ರ. ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಈಚೆಗೆ ಜರುಗಿತು. ಈ ಸಂದರ್ಭದಲ್ಲಿ ಥ್ರಿಲ್ಲರ್ ಮಂಜು ಅವರಿಗೆ ಸಂಪೂರ್ಣ ಸಾಥ್ ನೀಡಿ ಜೊತೆಯಾಗಿ ನಿಂತಿದ್ದವರು ನವರಸ ನಾಯಕ ಜಗ್ಗೇಶ್ ಅವರು.. ಸಂಸದರಾಗಿ ಬಹಳವೇ ಬ್ಯುಜಿ ಇರುವ ಜಗ್ಗೇಶ್ ಗೆಳೆಯನ ಸಲುವಾಗಿ ಆ ಇಡೀ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು.

 

ಎಂದಿನ ತುಂಟತನ ಮಾಡುತ್ತಾ ಎಲ್ಲರನ್ನು ನಗಿಸಿದರು ನವರಸ ನಾಯಕರು. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಉತ್ತರ ಕರ್ನಾಟಕ ಮೂಲದ ಅಭಯ್ ವೀರ್ ಮುಖ್ಯ ಪಾತ್ರದಲ್ಲಿದ್ದಾರೆ. ಚಿತ್ರದ ನಿರ್ಮಾಪಕರೂ ಉತ್ತರ ಕರ್ನಾಟಕ ದವರೇ ಅವರ ಹೆಸರು ಪ್ರಶಾಂತ್. ಗದಗ ಮೂಲದ ಪ್ರಶಾಂತ್ ಅವರು ಅಭಯ್ ವೀರ್ ಸಲುವಾಗಿಯೇ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರವು ಡಿಟಿಎಸ್ ಹಂತದಲ್ಲಿದ್ದು, ಶೀಘ್ರವೇ ಬಿಡುಗಡೆ ಕಾಣಲಿದೆ ಎಂಬ ಮಾಹಿತಿಯೂ ಬಂತು.

ಮುಖ್ಯ ಪಾತದರದಲ್ಲಿರುವ ನಿವೀಕ್ಷಾ, ಛಾಯಾಗ್ರಾಹಕ ಮಲ್ಲಿಕಾರ್ಜುನ್, ಸಂಗೀತ ನಿರ್ದೇಶಕ ವಿನು ಮನಸ್ಸು, ನಟ ಸುನೀಲ್ ಬಾಲ್ದಾರ್ ಹಾಗೂ ನಟ, ಸಹಾಯ ನಿರ್ದೇಶನ ಮಾಡಿರುವ ಲೋಕೇಂದ್ರ ಸೂರ್ಯ ಈ ಸಂದರ್ಭದಲ್ಲಿ ಮಾತನಾಡಿದರು.

ನಟ, ನಿರ್ದೇಶಕ, ಸಾಹಸ ನಿರ್ದೇಶಕರಾಗಿ ಥ್ರಿಲ್ಲರ್ ಮಂಜು ಬೆಳೆಯಲು ಅವರ ಸಹೋದರ ಕಾರಣ. ಅವರೂ ಮತ್ತು ಅವರ ಪುತ್ರ ಪುನೀತ್ ಸಹಾಯವನ್ನು ನೆನೆದ ಥ್ರಿಲ್ಲರ್ ಮಂಜು, ಪುನೀತ್ ಮೂಗನ ಪಾತ್ರವನ್ನು ನಿರ್ವಹಿಸಿರುವ ಬಗ್ಗೆ ವಿವರ ಕೊಟ್ಟರು. ಈ ಸಿನಿಮಾ ರಂಗದಲ್ಲಿ ಎಲ್ಲರೂ ಸೈಕಲ್ ಹೊಡೆದು ಕಷ್ಟಗಳನ್ನು ಅನುಭವಿಸಿದ ನಂತರವೇ ಮೇಲು ಬರುವುದು ಸಾಧ್ಯ ಎಂದು ವಿವರಿಸಿದರು ನವರಸ ನಾಯಕ ಜಗ್ಗೇಶ್.

Share :

About the Author

Leave a Reply

Your email address will not be published. Required fields are marked *

About our Editor

Snehapriya Nagaraj is one of the renowned film journalist with vast experience of more than 25 years in the field of film industry. Apart from being columist for many news publications he has also penned many novels. Nagaraj is honoured with many awards for his immense contribution in film media.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports