* ಪ್ರಚಾರ ಕ್ರಾಂತಿಯ ಒಳ ಸುಳಿಗಳು..*
* ಎಐ ಮೊಬೈಲ್ ನಿಂದ ನವ ಸ್ಟಾರ್ ಗಳ ಉದಯ *
ಈಗ್ಗೆ ಎರಡು ಮೂರು ವರ್ಷದ ಹಿಂದೆ ವೆಂಕಟೇಶ್ವರ ಹೆಸರಿನ ಪರ್ಯಾಯ ಹೆಸರಿನ ಚಿತ್ರ ಭಾರಿ ಸುದ್ದಿ ಮಾಡಿತು. ಹೋದಲ್ಲಿ ಬಂದಲ್ಲಿ ಅದರ ಗಳಿಕೆ ವಿಷಯ ಪೇಪರ್ (ಮೀಡಿಯಾ) ಟೈಗರ್ ಆಗಿ ಘರ್ಜಿಸಿತು..
ಮೊದಲ ದಿನದ ಗಳಿಕೆ ಸುಮಾರು 30 ಕೋಟಿ ಎನ್ನಲಾಯಿತು. ಕೆಲವರು ಆ ಸಂಖ್ಯೆ ಅದಲು ಬದಲು ಮಾಡಿ 13 ಕೋಟಿ ಎಂದರು. ವಾಸ್ತವದಲ್ಲಿ ಕನ್ನಡ ಚಿತ್ರವೆಂದು ಭಾರೀ ಪ್ರಚಾರ ಮಾಡಿಯೂ ಒಂದು ದಿನದ ಗಳಿಕೆ 2.5 ಕೋಟಿ ಅಥವಾ ಚಿತ್ರತಂಡವರ ಖುಷಿಗೆ ಮೂರು ಕೋಟಿ..
ಆದರೆ ಎಗ್ಗಿಲ್ಲದೆ ಪ್ರಚಾರ ಮಾಡಿದ ಆ ಚಿತ್ರ ಪ್ಲಾಪ್ ಪಟ್ಟಿ ಸೇರಿಕೊಂಡಿತು. ಚಿತ್ರದ ನಾಯಕ ನಟ ಎಲ್ಲೋ ಮೂಲೆ ಸೇರಿಕೊಂಡರು. ಚಿತ್ರದ ನಿರ್ಮಾಪಕ ಪಾಪದವರಂತೆ ಸಾಲಕ್ಕೆ ಬಡ್ಡಿ ಕಟ್ಟುತ್ತಾ ಚಿತ್ರರಂಗದಿಂದಲೇ ವಿಮುಖರಾದರು..
ಈಚೆಗೆ ಗಳಿಕೆಗೆ ದೂರವಾದ ಚಿತ್ರವೊಂದು ಅಷ್ಟು ಗಳಿಸಿತು ಇಷ್ಟು ಗಳಿಸಿತು ಎಂದು ಹೇಳಲಾಯಿತು. ಚಿತ್ರತಂಡದ ಮುಖ್ಯಸ್ಥರೇ ಚಿತ್ರಮಂದಿರಕ್ಕೆ ಬಾಡಿಗೆ ಪ್ರೇಕ್ಷಕರನ್ನು ಕರೆತಂದು ತುಂಬಿಸಿ ಸೋಸಿಯಲ್ ಮೀಡಿಯಾಗಳಿಗೆ ಅಪ್ ಲೋಡ್ ಮಾಡಿದರು ಎನ್ನಲಾಗಿತ್ತು..
ಆದರೆ ವಾಸ್ತವದಲ್ಲಿ ಆ ಚಿತ್ರಕ್ಕೆ ಮೊದಲ ವಾರದಲ್ಲೇ ಪ್ರೇಕ್ಷಕ ನಿರಾಸಕ್ತಿ ತೋರಿದ್ದ ಎಂಬುದು ಕಂಡು ಬಂದಿತ್ತು. ಅನೇಕ ಜಿಲ್ಲಾ ಕೇಂದ್ರಗಳಲ್ಲೇ ಪ್ರದರ್ಶನ ರದ್ದಾಗಿರುವ ವರದಿಗಳು ಬಂದಿದ್ದವು.

ಸುಳ್ಳ್ ಸುಳ್ಳೆ ಪ್ರಚಾರ ಮಾಡಿಕೊಳ್ಳುವ ಖಯಾಲಿ ಅನೇಕ ಸ್ಟಾರ್ ಗಳಿಗೆ ಇದ್ದರೂ ವಾಸ್ತವಾಂಶ ಬೆಳಕಿಗೆ ಬಾರದೆ ಹೋಗುವುದಿಲ್ಲ; ಅಂತಹ ಸಂದರ್ಭದಲ್ಲಿ ಸ್ಟಾರ್ ಗಳು ಮುಜುಗರವಾಗುವುದರಿಂದ ತಪ್ಪಿಸಿಕೊಳ್ಳಲು, ತಮ್ಮ ಅರಿವಿಗೆ ಬಾರದೆ ಇದೆಲ್ಲಾ ನಡೆದಿದೆ ಎಂದು ಜಾರಿಕೊಂಡಿದ್ದೂ ಉಂಟು..
ಕೆಲವು ಸ್ಟಾರ್ ನಟರು ತಮ್ಮ ಇಮೇಜ್ ಮತ್ತು ಸಂಭಾವನೆ ಹೆಚ್ಚಿಸಿಕೊಳ್ಳಲು ಮೀಡಿಯಾ ಟೈಗರ್ ಗಳ ಮೊರೆ ಹೋಗುವುದು ರಹಸ್ಯವಾಗಿ ಉಳಿದಿಲ್ಲ. ಕನ್ನಡದ ಮುಂಚೂಣಿಯ ಸ್ಟಾರ್ ನಟರೊಬ್ಬರು ಮಾಧ್ಯಮ ಮಿತ್ರರನ್ನು ಮನೆಗೇ ಆಹ್ವಾನಿಸಿ ಔತಣ ಮತ್ತು ಸುದ್ದಿ ಕೊಡುವುದು ಕೂಡ ರಹಸ್ಯವಲ್ಲ..
ಇಂತಹ ಸಾಹಸ ಮತ್ತು ಪ್ರಯತ್ನ ಬೇಡವೆಂದು ಯಾರೂ ಹೇಳುವುದಿಲ್ಲ; ಆದರೆ ಪ್ರಚಾರದ ಸಲುವಾಗಿಯೇ ಹಣ ಸುರಿದು (ಕೆಲವೊಮ್ಮೆ ನಿರ್ದೇಶಕನ ಹುಚ್ಚಾಟಕ್ಕೆ) ಯಾರನ್ನೋ ನಂಬಿ ಮನೆ ಮಠ ಮಾರಿಕೊಂಡು ಸಾಲ ಮೈ ಮೇಲೆ ಎಳೆದುಕೊಂಡು ಅಜ್ಞಾತ ಅನುಭವಿಸುವ ನಿರ್ಮಾಪಕನ ಅರಣ್ಯ ರೋಧನ ಯಾರಿಗೆ ಕೇಳುತ್ತದೆ..
ನಿರ್ಮಾಪಕ ಅಮಾಯಕನಲ್ಲ; ಆದರೆ ಕೊನೆ ಕೊನೆಗೆ ಕಾಡುವ ಅಸಹಾಯಕತೆ ಆತನನ್ನು ವಿಕ್ಷಿಪ್ತ ಸಾಹಸಗಳಿಗೆ ಪ್ರೇರೇಪಿಸಿತ್ತದೆ. ಹಣ ಖರ್ಚು ಮಾಡಿ ಕೊನೆಗೆ ಸಾಲಗಾರ ಮತ್ತು ಕಳೆದುಕೊಂಡವ ಆಗಿ ಕಳೆದು ಹೋಗುತ್ತಾನೆ.
ಈಗಾಗಲೇ ಕನ್ನಡ ಚಿತ್ರಗಳ ನಿರ್ಮಾಣಕ್ಕೆ ಯಾರೂ ಮುಂದೆ ಬರುತ್ತಿಲ್ಲ. ಇದರಿಂದ ಸ್ಟಾರ್ ಗಳ ಹತಾಶೆಯೂ ಮೇರೆ ಮೀರಿದೆ. ಆದ್ದರಿಂದಲೇ ಅವರು ಸುಳ್ಳ್ ಪ್ರಚಾರವನ್ನು ಅವಲಂಭಿಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುವ ವಿಷಯ..
ಈಗ ಪ್ರಚಾರ ತಂತ್ರವೂ ಸುಲಭವಾಗಿದೆ. ಎಐ ತಂತ್ರಜ್ಞಾನದ ಮೂಲಕ ಕೋಟಿ ಗಳಿಕೆಯ ಪೋಸ್ಟರ್ ಮಾಡಿ ಬಿಡುವುದು ಅತಿ ಸುಲಭ. ಅದು ತಲುಪುವಂತೆ ನೋಡಿಕೊಳ್ಳಲು ಈಗ ಸೋಷಿಯಲ್ ಮೀಡಿಯಾದ ಸ್ಟಾರ್ ಪತ್ರಕರ್ತರು ಇದ್ದೇ ಇದ್ದಾರೆ..
ಮುಖ್ಯವಾಗಿ ಹಣ ಖರ್ಚು ಮಾಡಿ ಲಾಸ್ ಆಗುವ ನಿರ್ಮಾಪಕ ಮಾತ್ರ ಇಲ್ಲಿ ಬರಿಗೈ ಆಗುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಧೈರ್ಯದಿಂದ ಹಣ ಹೂಡಿಕೆ ಮಾಡಿ ಅದೃಷ್ಟ ಪರೀಕ್ಷೆ ಗೆ ನಿಂತಿರುವ ಕನ್ನಡದ ಕೆಲವೇ ನಿರ್ಮಾಪಕರನ್ನು ರಕ್ಷಿಸಬೇಕಾಗಿದೆ..















