ಕೋಮಲ್ ನಗಿಸಲು ಸಿದ್ಧ ಪ್ರೇಕ್ಷಕ ಫುಲ್ ರಿಲ್ಯಾಕ್ಸ್..

* ರಿಲ್ಯಾಕ್ಸ್ ಇದೇ ವಾರ (ನ.27ಕ್ಕೆ) ಬಿಡುಗಡೆ * * ಕೋಮಲ್–ಸೋನಲ್ ಜೋಡಿ, ವಿನೋದ್ ಪ್ರಭಾಕರ್ ವಿಶೇಷ ಪಾತ್ರ * ಹಾಸ್ಯ ಪಾತ್ರಗಳ ಮೂಲಕ ಜನಮನ ಗೆದ್ದು ಸೀರಿಯಸ್ ಪಾತ್ರಗಳನ್ನು ನುಂಗಿ ಇದೀಗ ಮತ್ತೆ ಹಾಸ್ಯ ಪಾತ್ರದತ್ತ ಹೊರಳಿರುವ ಸೆನ್ ಸೆಷನಲ್ ಸ್ಟಾರ್ ಕೋಮಲ್ ಕುಮಾರ್ ಈಗ ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿ ಬರುತ್ತಿದ್ದಾರೆ.. ಅದೇ ರಿಲ್ಯಾಕ್ಸ್..! ಮಧು ಮೋಹನ್ ಕೃಷ್ಣ ನಿರ್ಮಾಣದ ಹಾಗೂ ಶ್ರೀನಿವಾಸ್ ಮಂಡ್ಯ ನಿರ್ದೇಶನದ ‘ರಿಲ್ಯಾಕ್ಸ್’ ಇದೇ ವಾರ ಬಿಡುಗಡೆ ಕಾಣುತ್ತಿದ್ದು, ಹಾಸ್ಯದ…

Share :

* ರಿಲ್ಯಾಕ್ಸ್ ಇದೇ ವಾರ (ನ.27ಕ್ಕೆ) ಬಿಡುಗಡೆ *

* ಕೋಮಲ್–ಸೋನಲ್ ಜೋಡಿ, ವಿನೋದ್ ಪ್ರಭಾಕರ್ ವಿಶೇಷ ಪಾತ್ರ *

ಹಾಸ್ಯ ಪಾತ್ರಗಳ ಮೂಲಕ ಜನಮನ ಗೆದ್ದು ಸೀರಿಯಸ್ ಪಾತ್ರಗಳನ್ನು ನುಂಗಿ ಇದೀಗ ಮತ್ತೆ ಹಾಸ್ಯ ಪಾತ್ರದತ್ತ ಹೊರಳಿರುವ ಸೆನ್ ಸೆಷನಲ್ ಸ್ಟಾರ್ ಕೋಮಲ್ ಕುಮಾರ್ ಈಗ ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿ ಬರುತ್ತಿದ್ದಾರೆ..

ಅದೇ ರಿಲ್ಯಾಕ್ಸ್..!

ಮಧು ಮೋಹನ್ ಕೃಷ್ಣ ನಿರ್ಮಾಣದ ಹಾಗೂ ಶ್ರೀನಿವಾಸ್ ಮಂಡ್ಯ ನಿರ್ದೇಶನದ ‘ರಿಲ್ಯಾಕ್ಸ್’ ಇದೇ ವಾರ ಬಿಡುಗಡೆ ಕಾಣುತ್ತಿದ್ದು, ಹಾಸ್ಯದ ರಸದೌತಣವನ್ನೇ ಉಣಬಡಿಸಲಿದೆ..

ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನ ಮ್ಯಾನರಿಸಂನ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ನಟ ಕೋಮಲ್ ಕುಮಾರ್ ಹಾಗೂ ನಟಿ ಸೋನಲ್ ಮೊಂತೆರೊ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ‌..

ಜೊತೆಗೆ ವಿಶೇಷ ಪಾತ್ರದಲ್ಲಿ ಮರಿ ಟೈಗರ್ ವಿನೋದ್ ಪ್ರಭಾಕರ್ ನಟಿಸಿದ್ದಾರೆ. ಈ ಚಿತ್ರಕ್ಕೆ ಮುರಳಿಕೃಷ್ಣ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಚಿತ್ರದ ಬಿಡುಗಡೆ ಪೂರ್ವದಲ್ಲಿ ನಡೆದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರತಂಡ ಖುಷಿಯಿಂದ ಭಾಗವಹಿಸಿತ್ತು. ಜೊತೆಗೆ ನಿರ್ಮಾಪಕರಾದ ಭಾ.ಮ. ಹರೀಶ್ ಹಾಗೂ ಚಿಂಗಾರಿ ಮಹದೇವ್ ಟ್ರೈಲರ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು.

ನಿರ್ಮಾಪಕ ಅಂಬಟ್ಟಿ ಮಧು ಮೋಹನ್ ಕೃಷ್ಣ ಹಾಗೂ ನಿರ್ದೇಶಕ ಶ್ರೀನಿವಾಸ್ ಮಂಡ್ಯ ಚಿತ್ರದ ಬಿಡುಗಡೆಯ ಕುರಿತು ಮಾಹಿತಿ ಹಂಚಿಕೊಂಡರು.

ನಟ ಕೋಮಲ್ ಕುಮಾರ್ ತಮ್ಮ ಎಂದಿನ ಹಾಸ್ಯಮಯ ಮಾತುಗಳ ಮೂಲಕ ಚಿತ್ರದ ಚಿತ್ರದ ವೈಶಿಷ್ಟ್ಯ ಗಳ ಬಗ್ಗೆ ಮಾತನಾಡಿದರು.

ಚಿತ್ರವನ್ನು ಒಬ್ಬರೇ ಕುಳಿತು ನೋಡಿದರೆ ನಗುತ್ತೀರಿ, ಜೊತೆಯಲ್ಲಿ ಕುಳಿತು ನೋಡಿದರೆ ಬಿದ್ದು ಬಿದ್ದು ನಗುತ್ತೀರಿ. ಚಿತ್ರವನ್ನು ನೋಡಿ ಹರಸಿ ಎಂದು ಮನವಿ ಮಾಡಿದರು.

ಸೋನಲ್ ಮೊಂತೆರೊ ಸಹ ಚಿತ್ರದ ಸದಾಶಯಗಳ ಕುರಿತು ಮಾತನಾಡಿದರು. ಚಿತ್ರಕ್ಕೆ ರಾಕೇಶ್ ಸಿ. ತಿಲಕ್ ಛಾಯಾಗ್ರಹಣ, ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನ ಹಾಗೂ ಅರವಿಂದ್ ರಾಜ್ ಸಂಕಲನವಿದೆ. ನಂದು ಹಿನ್ನೆಲೆ ಸಂಗೀತ ನೀಡಿದ್ದು, ಯೋಗಾನಂದ್ ಸಾಹಸ ನಿರ್ದೇಶನ ಮಾಡಿದ್ದಾರೆ. ಕಲೈ ಮತ್ತು ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ.

ಹಾಸ್ಯ, ಪ್ರೀತಿ ಹಾಗೂ ಭಾವನಾತ್ಮಕ ಅಂಶಗಳೊಂದಿಗೆ ಮೂಡಿಬಂದಿರುವ ‘ರಿಲ್ಯಾಕ್ಸ್’ ಚಿತ್ರದಲ್ಲಿ ಕೋಮಲ್ ಅವರ ಹಾಸ್ಯ, ಸೋನಲ್ ಅವರ ಅಭಿನಯ ಹಾಗೂ ವಿನೋದ್ ಪ್ರಭಾಕರ್ ಅವರ ವಿಶೇಷ ಪಾತ್ರ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಲಿದೆ..

Share :

About the Author

Leave a Reply

Your email address will not be published. Required fields are marked *

About our Editor

Snehapriya Nagaraj is one of the renowned film journalist with vast experience of more than 25 years in the field of film industry. Apart from being columist for many news publications he has also penned many novels. Nagaraj is honoured with many awards for his immense contribution in film media.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports