ಬೃಂದಾವಿಹಾರಿ ಚಿತ್ರವಿಮರ್ಶೆ

ರೇಟಿಂಗ್ : 4/5 ನಿರ್ಮಾಣ : ಸಮೃದ್ಧಿ ಮಂಜುನಾಥ್ ನಿರ್ದೇಶನ : ಶ್ರೀನಿವಾಸರಾಜು ರಾಧಾ ಮಾಧವ ವಿನೋದ ಹಾಸ ಭಾವನೆಗಳ ಮಾರಾಟದ ಮೋಸ ಪುರಾಣದಲ್ಲಿ ರಾಧೆಯಂತಹ ಹೃದಯ ಶ್ರೀಮಂತೆ ಮತ್ತೊಬ್ಬಳಿಲ್ಲ; ಶ್ರೀಕೃಷ್ಣ ಮಾಧವ ಕೂಡ ರಾಧೆಯ ಹೃದಯ ಸಾಮ್ರಾಜ್ಯದಲ್ಲಿ ಮಿಂದೇಳುವವನು.. ಇಲ್ಲಿನ ಮಾಧವ ಅತ್ಯಂತ ಮುಗ್ಧ ಮತ್ತು ಶಕ್ತಿ ಶಾಲಿ ರಾಧೆಯ ಪ್ರೇಮದಲ್ಲಿ ಮಿಂದೇಳುವಾಗ ‘ಕೊಳಲಿನ ಕರೆ’ಯಲ್ಲಿ ರಾಧೆಯನ್ನು ತನ್ಮಯಗೊಳಿಸುವವನು.. ಮಾಧವ (ಗಣೇಶ್)ನ ಜಗತ್ತು ಬೇರೆ. ಆದರೆ ಅದು ಕೃತಕವೆಂಬ ಅರಿವು ಆತನಿಗಿಲ್ಲ. ‘ನನ್ನ ಪ್ರಪಂಚ ಸುಂದರ’…

Share :

ರೇಟಿಂಗ್ : 4/5

ನಿರ್ಮಾಣ : ಸಮೃದ್ಧಿ ಮಂಜುನಾಥ್

ನಿರ್ದೇಶನ : ಶ್ರೀನಿವಾಸರಾಜು

ರಾಧಾ ಮಾಧವ ವಿನೋದ ಹಾಸ
ಭಾವನೆಗಳ ಮಾರಾಟದ ಮೋಸ

ಪುರಾಣದಲ್ಲಿ ರಾಧೆಯಂತಹ ಹೃದಯ ಶ್ರೀಮಂತೆ ಮತ್ತೊಬ್ಬಳಿಲ್ಲ; ಶ್ರೀಕೃಷ್ಣ ಮಾಧವ ಕೂಡ ರಾಧೆಯ ಹೃದಯ ಸಾಮ್ರಾಜ್ಯದಲ್ಲಿ ಮಿಂದೇಳುವವನು..

ಇಲ್ಲಿನ ಮಾಧವ ಅತ್ಯಂತ ಮುಗ್ಧ ಮತ್ತು ಶಕ್ತಿ ಶಾಲಿ ರಾಧೆಯ ಪ್ರೇಮದಲ್ಲಿ ಮಿಂದೇಳುವಾಗ ‘ಕೊಳಲಿನ ಕರೆ’ಯಲ್ಲಿ ರಾಧೆಯನ್ನು ತನ್ಮಯಗೊಳಿಸುವವನು..

ಮಾಧವ (ಗಣೇಶ್)ನ ಜಗತ್ತು ಬೇರೆ. ಆದರೆ ಅದು ಕೃತಕವೆಂಬ ಅರಿವು ಆತನಿಗಿಲ್ಲ. ‘ನನ್ನ ಪ್ರಪಂಚ ಸುಂದರ’ ಎಂಬ ಭ್ರಮೆಯಲ್ಲಿರುತ್ತಾನೆ. ಅದು ಮನರಂಜನಾ ಮಾಧ್ಯಮ ನಿರ್ಮಿಸಿದ ಕೃತಕ ಪ್ರಪಂಚ ಬೃದಾವನ..

ಆತ ಬೃಂದಾವಿಹಾರಿ..!

ಕಣ್ಮನ ತಣಿಸುವ ಶಿಲ್ಪಗಳು ಮತ್ತು ಪರಿಶುದ್ಧ ನೀರಿನ ನದಿ, ಜಲಪಾತ; ಕಣ್ಣು ಹಾಯಿಸಿದಷ್ಟು ಹಸಿರು, ಪೈರು, ಕೆಂಪನೆಯ ಮೈದಾನ..

ಬೃಂದಾವನದ ಚೆಲುವು ಮತ್ತು ಮರೆತು ಹೋದ ಗಿಲ್ಲಿ ದಾಂಡು ಇತರ ಆಟಗಳು. ಅದರ ಜೊತೆ ಕ್ರಿಕೆಟ್ ಸಮೀಕರಣ. ಎಲ್ಲವನ್ನು ಚೆಚ್ಚಿ ಬಿಸಾಕುವ ಮಾಧವ; ಪ್ರೇಮದ ವಿಚಾರಕ್ಕೆ ಬಂದರೆ ಅದಮ್ಯ ಮಾನವ..!

ಚಿಕ್ಕ ವಯಸ್ಸಿನಿಂದಲೇ ಪ್ರೇಮಿಸುವ ಮೀರಾ ಮತ್ತು ಬೃಂದಾವನದ ಚೆಲುವೆ ರಾಧಾ ಇಬ್ಬರ ಚೆಲುವಿಗೆ ಮನಸೋಲುವುದು ಪ್ರೇಕ್ಷಕ. ಜೊತೆಗೆ ಹಾಸ್ಯ ಉಣ ಬಡಿಸುವ ಕುರಿ ಪ್ರತಾಪ್, ಪಾವಗಡ ಮಂಜು ಮತ್ತು ಜಗಪ್ಪ..

ಅಜ್ಜಿ ಲಕ್ಷ್ಮಿ ಪರಿಚಯಿಸುವ ಸುಂದರ ಪ್ರಪಂಚ ಅಜ್ಜ ಅಶೋಕ್. ಎಲ್ಲವೂ ಇದ್ದು ರಾಧೆಯ ಅಗಾಧ ಪ್ರೇಮದಲ್ಲಿ ಬೀಳುವ ಮಾಧವನ ಜಗತ್ತು ಬೇರೆಯದೇ ಆದರೂ ಹೊರಗಿನ ಪ್ರಪಂಚ ಆತನನ್ನು ಮುಗಿಸಲು ಹವಣಿಸುತ್ತದೆ..

ಅದೇ ರಿಯಾಲಿಟಿ ಶೋ ಮಾಯೇ..!

ಸುಂದರ ಮತ್ತು ಅಗಾಧ ಪ್ರೇಮಕ್ಕೆ ಅತ್ಯಾಧುನಿಕ ಪ್ರಪಂಚ ರಿಯಾಲಿಟಿ ಶೋ ಗಳ ಕೃತಕತೆ ಮುಳುವಾಗುತ್ತದೆ.
ಮುಗ್ಧ ಮಾಧವನನ್ನು ಬೇರೆ ಪ್ರಪಂಚದಲ್ಲಿ ಮತ್ತು ಸುಂದರ ಹುಡುಗಿಯರ ಪ್ರೇಮದಲ್ಲಿ ಕನಲುವಂತೆ ಮಾಡಿ ಟಿಅರ್ ಪಿ ಹೆಚ್ಚಿಸಿಕೊಳ್ಳುವ ಮನರಂಜನಾ ಜಗತ್ತಿನ ಕಥೆ ಬಿಚ್ಚಿಕೊಳ್ಳುತ್ತದೆ..

ಆಧುನಿಕತೆಯ ರೂಪದಲ್ಲಿ ಜನರನ್ನು ಆವರಿಸುವ ಕೃತಕ ಜಗತ್ತು ಮಾಧವನ ಮುಗ್ಧ ವರಸೆಗಳನ್ನು ನಂಬುತ್ತದೆ. ಅದನ್ನು ಮತ್ತಷ್ಟು ರೋಚಕವನ್ನಾಗಿ ಮಾಡಿ ಉಣ ಬಡಿಸಲಾಗುತ್ತದೆ. ಸದಾ ಥ್ರಿಲ್ ಹುಡುಕುವ ಜನರಿಗೆ ಮುಗ್ಧ ಮತ್ತು ಕ್ರೌರ್ಯದ ಮನಸ್ಸುಗಳ ಹಪಾಹಪಿ ಮೋಜೇನಿಸುತ್ತದೆ..

ರಿಯಾಲಿಟಿ ಶೋ ಒಂದು ಭಾವನಾತ್ಮಕ ಮಾಂಸ ದಂಧೆ ಎಂದು ಸಂಭಾಷಣೆಯಲ್ಲೇ ಹೇಳಲಾಗುತ್ತದೆ. ಒಂದಷ್ಟು ಜನರನ್ನು ಹೊಸ ಪ್ರಪಂಚದಲ್ಲಿ ಕೂಡಿ ಹಾಕಿ ಆ ಪ್ರಾಣಿ ಏನು ಮಾಡುತ್ತದೆ ಎಂಬ ಕೌತುಕವನ್ನು ಜನರಲ್ಲಿ ಹೆಚ್ಚಿಸುವುದು ಮನರಂಜನಾ ಮಾಧ್ಯಮಗಳ ವಿಕೃತ ಒಳನೋಟ..

ವಾಸುದೇವ್ (ರಾಮ್ ಕುಮಾರ್) ಮನರಂಜನಾ ಕ್ಷೇತ್ರದ ದಿಗ್ಗಜ. ಆತನ ಶೋ ಚಾನೆಲ್ ಟಿಆರ್ ಪಿ ಮುಂದೆ ಬೇರೆಯದೆಲ್ಲಾ ಗೌಣ. ಆದ್ದರಿಂದ ಎದುರಾಳಿ ಚಾನೆಲ್ ಗಳ ಕ್ರೌರ್ಯವಂತ ಮನುಷ್ಯರು ಮಾಧವನನ್ನು ಮುಗಿಸಲು ರೂಪಿಸುವ ಹುನ್ನಾರವನ್ನು ಜಗಜಟ್ಟಿ ಮಾದರಿಯ ಮಾಧವ ವಿಫಲಗೊಳಿಸುವುದೇ ರೋಚಕ..

ಆಧುನಿಕ ಪ್ರಪಂಚ ಬೃಂದಾವನಕ್ಕಿಂತ ನೂರು ವರ್ಷ ಮುಂದಿರುತ್ತದೆ. ಅದರಲ್ಲಿ ಮಾಧವನ ಸಾಕು ಅಪ್ಪ ಅಮ್ಮ, ತಂಗಿ ಹಿತೈಷಿ ಎಲ್ಲರೂ ಇರುತ್ತಾರೆ. ಹಿರಿಯ ನಟ ಶ್ರೀನಿವಾಸಮೂರ್ತಿ ಸೇರಿದಂತೆ ಅನೇಕರು ಬಂದು ಹೋಗುತ್ತಾರೆ..

ಚಾನೆಲ್ ಪ್ರಪಂಚದಲ್ಲಿ ಸಾಧು ಇದ್ದಾರೆ. ಬೃಂದಾವನದ ಚೆಲುವಿಗೆ ವಿರುದ್ಧವಾದ ಜಾಲಿ ಪೋಲಿ ಸಂಭಾಷಣೆ ಆವರಿಸಿರುವ ಪ್ರಪಂಚ ರಿಯಾಲಿಟಿ ಶೋಗಳ ಕೆಟ್ಟ ವರ್ತನೆಗಳ ನಿದರ್ಶನಗಳಂತೆ..

ಕೊನೆಯಲ್ಲಿ ಮಾಧವ ಕನಲುತ್ತಾನೆ. ಒಳಗೂ ಕಣ್ಣೀರು ಹೊರಗೂ ಕಣ್ಣೀರು. ಆದರೆ ರಾಧಾ ಮತ್ತು ಮೀರಾ ಪ್ರೇಮದ ಅಮಲು ಬಿಡಿಸಿಕೊಳ್ಳದೇ ಮಾಧನವ ಪಾಲಾಗುವುದು ಕೃಷ್ಣನಿಗೆ ಯಾರು ಸಾಟಿ ಎಂಬಂತೆ ಮುಕ್ತಾಯ. ಆದರೆ ಈ ಕಥೆ 1998ರಲ್ಲಿ ಬಿಡುಗಡೆಯಾದ ಜಿಮ್ ಕ್ಯಾರಿ ಅವರ ಹಾಲಿವುಡ್ ಸಿನಿಮಾ ‘ಟ್ರೂಮೆನ್ ಶೋ’ ವನ್ನು ಹೋಲುತ್ತದೆ ಎಂಬುದು ಬೇರೆ ಮಾತು..

ಮುಗ್ಧ ವರಸೆಯಲ್ಲಿ ಇಡೀ ಚಿತ್ರವನ್ನು ಗಣೇಶ್ ಆವರಿಸಿಕೊಂಡರೆ, ದೇವಿಕಾ ಭಟ್ ಮತ್ತು ಮಾಳವಿಕ ಶರ್ಮಾ ಸ್ನಿಗ್ಧ ಸೌಂದರ್ಯದಿಂದ ಗೆಲ್ಲುತ್ತಾರೆ. ಹಿರಿಯ ನಟಿ ಲಕ್ಷ್ಮಿ ಅವರ ಜೊತೆ ಭಾವನಾತ್ಮಕ ದೃಶ್ಯಗಳಲ್ಲಿ ಪಾಲ್ಗೊಳ್ಳುವ ಅವಕಾಶ ಗಣೇಶ್ ಅವರಿಗೆ ಸಿಕ್ಕಿದೆ..

ರಾಮ್ ಕುಮಾರ್ ಪಾತ್ರ ವಿಶೇಷವಾಗಿದೆ. ‘ಗೆಜ್ಜೆನಾದ’ ಜೋಡಿ ಶ್ವೇತಾ ಜೊತೆಗೂಡಿದ್ದಾರೆ. ರಂಗಾಯಣ ರಘು, ಅವಿನಾಶ್, ಅಚ್ಯುತ್ ಕುಮಾರ್, ಸುಂದರ್ ವೀಣಾ, ನಿವಿಷ್ಕಾ ಪಾಟೀಲ್ ಹೀಗೆ ದೊಡ್ಡ ತಾರಾಗಣವಿದೆ.

ಹೇಶಮ್ ಅಬ್ದುಲ್ ವಹಾಬ್ ಸಂಗೀತ ಹಬ್ಬದಂತೆ. ಜೊತೆಗೆ ಸನಾತನ ಒಲವಿರುವ ವಿ.ನಾಗೇಂದ್ರ ಪ್ರಸಾದ್ ಹಬ್ಬದೂಟ ಉಣ ಬಡಿಸುವಂತೆ ಹಾಡುಗಳನ್ನು ಬರೆದಿದ್ದಾರೆ. ಛಾಯಾಗ್ರಾಹಕ ವೆಂಕಟ್ ಆರ್.ಪ್ರಸಾದ್ ಸುಂದರ ಫ್ರೇಮ್ ಗಳನ್ನು ಕಟ್ಟಿಕೊಟ್ಟಿದ್ದಾರೆ.

Share :

About the Author

Leave a Reply

Your email address will not be published. Required fields are marked *

About our Editor

Snehapriya Nagaraj is one of the renowned film journalist with vast experience of more than 25 years in the field of film industry. Apart from being columist for many news publications he has also penned many novels. Nagaraj is honoured with many awards for his immense contribution in film media.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports